

ನವದೆಹಲಿ: ನಾವು ಕೆಲವು ಅದ್ಭುತ ವಿಶ್ವ ದಾಖಲೆಗಳನ್ನು ನೋಡುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ತಲೆಯ ಮೇಲೆ 319 ವೈನ್ ಗ್ಲಾಸ್ಗಳನ್ನು ಹೊತ್ತು ವಿಶ್ವ ದಾಖಲೆ ಮಾಡಿದ ಖುಷಿ ನಡುವೆ ಕುತೂಹಲಕಾರಿ ಸಂಗತಿಯೊಂದು ನಡೆದಿದೆ.
2023 ಮೇ 26ರಂದು ಅರಿಸ್ಟಾಟಲ್ ವ್ಯಾಲರಿಟಿಸ್ ಅವರು ತಮ್ಮ ತಲೆಯ ಮೇಲೆ 319 ಗಾಜಿನ ಲೋಟಗಳನ್ನು ಬ್ಯಾಲೆನ್ಸ್ ಮಾಡುವುದಕ್ಕಾಗಿ ಗಿನ್ನೆಸ್ ದಾಖಲೆ ಪಟ್ಟಿಯಲ್ಲಿ ಸೇರ್ಪಡೆ ಗೊಂಡಿದ್ದಾರೆ.
ವಿಡಿಯೋದಲ್ಲಿ ಏನಿದೆ?: ವ್ಯಾಲರಿಟಿಸ್ ಅವರು ತಮ್ಮ ತಲೆಯ ಮೇಲೆ 319 ಗಾಜಿನ ಲೋಟಗಳನ್ನು ಹೊತ್ತುಕೊಂಡು ನೃತ್ಯ ಮಾಡುವುದನ್ನು ನಾವು ನೋಡುತ್ತೇವೆ. ಜತೆಗೆ ಇದ್ದ ಸಹಾಯಕರು ವ್ಯಾಲರಿಟಿಸ್ ತಲೆ ಮೇಲೆ ಇರು ಗಾಜಿನ ಲೋಟಗಳ ಸಂಖ್ಯೆಯನ್ನು ಹೆಚ್ಚಿಸುತ್ತಲೇ ಇರುತ್ತಾರೆ. ಹೀಗೆ ತಲೆ ಮೇಲಿದ್ದ ಗ್ಲಾಸ್ಗಳನ್ನು ಬ್ಯಾಲೆನ್ಸ್ ಮಾಡುತ್ತಾ ವ್ಯಾಲರಿಟಿಸ್ ಕೆಳಗೆ ಬಿಳಿಸುತ್ತಾರೆ. ಆದರೂ ಈ ವ್ಯಕ್ತಿ ಹಿಂದಿನ ದಾಖಲೆಗಳನ್ನು ಮುರಿದು ವಿಶ್ವದಾಖಲೆ ಬರೆದಿದ್ದಾರೆ. ಅರಿಸ್ಟಾಟೆಲ್ಸ್ ವ್ಯಾಲರಿಟಿಸ್ ಅವರ ವಿಡಿಯೋವನ್ನು ನೆಟಿಜನ್ಗಳನ್ನು ಮೆಚ್ಚುಗೆ ಸೂಚಿಸಿ ಕಾಮೆಂಟ್ ಮಾಡುತ್ತಿದ್ದಾರೆ.
ವ್ಯಾಲರಿಟಿಸ್ ಇಂತಹ ಸಾಧನೆ ಮಾಡುತ್ತಿರುವುದು ಇದೇ ಮೊದಲಲ್ಲ. ಅವರು 49 ಗ್ಲಾಸ್ಗಳನ್ನು ಬ್ಯಾಲೆನ್ಸ್ ಮಾಡಿ ನೃತ್ಯ ಮಾಡಿದ ದಾಖಲೆಯನ್ನೂ ಹೊಂದಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ.