ನಿದ್ದೆ ಮಂಪರಿನಲ್ಲಿ ಸಾವಿರಕ್ಕೂ ಅಧಿಕ ಕಂಪನಿಗಳಿಗೆ ಅರ್ಜಿ ಹಾಕಿದ ಭೂಪ; AI ಕರಾಮತ್ತಿನಿಂದ ರಾತ್ರೋರಾತ್ರಿ ಚೇಂಜಾಯ್ತು ಈತನ ಲಕ್​

Mobile Use
Published on

ನವದೆಹಲಿ: ಉದ್ಯೋಗಾಕಾಂಕ್ಷಿಗಳು ತಮ್ಮ ಅತ್ಯುತ್ತಮ ಸಾಮರ್ಥ್ಯಗಳ ಬಗ್ಗೆ ತಿಳಿಸಲು ರೆಸ್ಯೂಮ್​​ಅನ್ನು(CV) ತಯಾರು ಮಾಡುವುದು ಅತಿಮುಖ್ಯ ಕೆಲಸವಾಗಿದೆ. ಈ ಡಾಕ್ಯುಮೆಂಟ್‌ನ ಆಧಾರದ ಮೇಲೆ ಒಬ್ಬರು ಆ ಕೆಲಸಕ್ಕೆ ಸೂಕ್ತ ಅಥವಾ ಇಲ್ಲವೇ ಎಂಬುದನ್ನು ಕಂಪನಿಯವರು ನಿರ್ಧರಿಸುತ್ತಾರೆ. ಇದೀಗ ವ್ಯಕ್ತಿಯೊಬ್ಬರು ಎಐ (AI)ಮೂಲಕ ತಯಾರಿಸಿದ ರೆಸ್ಯೂಮ್​ ತಮ್ಮ ಕೈ ಹೇಗೆ ಹಿಡಿಯಿತು ಎಂಬುದರ ಬಗ್ಗೆ ಹೇಳಿಕೊಂಡಿದ್ದು, ಇದರಿಂದಾದ ಅನುಕೂಲವನ್ನು ಹಂಚಿಕೊಂಡಿದ್ದಾರೆ. 

ಕೃತಕ ಬುದ್ದಿಮತ್ತೆ (AI) ಇಂದಿನ ಟ್ರೆಂಡ್​ನಲ್ಲಿ ಅತ್ಯಂತ ಲಾಭದಾಯಕ ಎಂದು ಪರಿಗಣಿಸಲಾಗಿದ್ದು, ಜನರು ಹೆಚ್ಚು ಎಐನ ಮೊರೆ ಹೋಗುತ್ತಿದ್ದಾರೆ. ಇದರಲ್ಲಿ ಲಾಭವೂ ಇದೆ ಮತ್ತು ಅಪಾಯವೂ ಇದೆ. ಇದೀಗ ವ್ಯಕ್ತಿಯೊಬ್ಬರು ಎಐನಿಂದ ತಮ್ಮಗಾದ ಲಾಭವನ್ನು ಸಾಮಾಜಿಕ ಮಾಧ್ಯಮ ರೆಡ್ಡಿಟ್​ನಲ್ಲಿ ಹಂಚಿಕೊಂಡಿದ್ದು, ಈ ಬಗ್ಗೆ ವಿವರಿಸಿದ್ದಾರೆ.

ರೆಡ್ಡಿಟ್​ನಲ್ಲಿ ವೈರಲ್​ ಆಗಿರುವ ಪೋಸ್ಟ್ ನೋಡುವುದಾದರೆ, ನಾನು ಮಲಗುವ ಮುನ್ನ ಕೆಲಸಕ್ಕೆ ಅರ್ಜಿ ಹಾಕುವುದಕ್ಕೆ ಎಐ ಬಾಟ್​ ತಯಾರಿಸಿ ಅದಕ್ಕೆ ಅನುಮತಿ ನೀಡಿದೆ. ನಾನು ಮಲಗಿದ್ದಾಗ ರಾತ್ರಿಯಿಡೀ ಎಐ (AI) ಮೂಲಕ ಸಾವಿರಕ್ಕೂ ಅಧಿಕ ಕಂಪನಿಗಳಿಗೆ ಕೆಲಸಕ್ಕೆ ಅರ್ಜಿ ಹಾಕಲಾಗಿದ್ದು, 50ಕ್ಕೂ ಹೆಚ್ಚು ಕಂಪನಿಯವರು ನನಗೆ ಕರೆ ಮಾಡಿದ್ದಾರೆ. ಒಂದು ಎಐ ಬಾಟ್​ (AI) ನನಗೆ ಇಷ್ಟೆಲ್ಲಾ ಸಹಕಾರಿಯಾಯ್ತು. ಸಂದರ್ಶಕರು ಕೇಳಿದ ಪ್ರಶ್ನೆಗೆ ಎಐ ಬಾಟ್ ಸರಿಯಾಗಿ ಉತ್ತರಿಸಿದ್ದು, ನನಗೆ ಕಂಪನಿಗಳಿಂದ ಆಫರ್​ ಬರುತ್ತಿವೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net