ನಾಗರಹಾವಿಗೆ ಚುಂಬಿಸುತ್ತಿದ್ದವನಿಗೆ ಹಣೆಗೆ ಕಚ್ಚಿದ ಹಾವು! Snake Attacked ವಿಡಿಯೋ ವೈರಲ್​

Snake Attacked
Published on

ಪಾಕಿಸ್ತಾನ: ( Snake Attacked )  ಹಾವು ಎಂದು ಕೇಳಿದ ತಕ್ಷಣ ಜನ ಓಡಿ ಹೋಗುತ್ತಾರೆ.  ಆದರೆ ಅನೇಕ ಜನರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹಾವುಗಳೊಂದಿಗೆ ಆಟವಾಡುವುದನ್ನು ಕಾಣಬಹುದು. ಕೆಲವೊಮ್ಮೆ ಅವರ ಆಟವಾಡುವುದು ಅವರ ಜೀವಕ್ಕೆ ಅಪಾಯವಾಗಿದೆ. ಸದ್ಯ ಅಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 ವಿಡಿಯೋದಲ್ಲಿ ಏನಿದೆ?: 

ವ್ಯಕ್ತಿಯೊಬ್ಬ ರಾಜ ನಾಗರಹಾವನ್ನು ಕೈಯಲ್ಲಿ ಹಿಡಿದುಕೊಂಡು ವಿಡಿಯೋ ಮಾಡುತ್ತಿದ್ದಾನೆ.  ವ್ಯಕ್ತಿ ಕ್ಯಾಮರಾ ಮುಂದೆ ಮಾತನಾಡುತ್ತಿರುವಾಗ,  ಇದ್ದಕ್ಕಿದ್ದಂತೆ ನಾಗರ ಹಾವಿಗೆ ಚುಂಬಿಸಲು ಪ್ರಾರಂಭಿಸುತ್ತಾನೆ. ಇದರಿಂದಾಗಿ ಹಾವು ಕೋಪಗೊಳ್ಳುತ್ತದೆ ಮತ್ತು ಪ್ರತಿಯಾಗಿ ಅದು ಅವನ ಮೇಲೆ ದಾಳಿ ಮಾಡುತ್ತದೆ.   ಅವನ ಹಣೆಯ ಮೇಲೆ ಕಚ್ಚುತ್ತದೆ.

ಈ ವೀಡಿಯೋ ಉಜ್ಬೇಕಿಸ್ತಾನ್‌ನಿಂದ ಬಂದಿದ್ದು, ಹಣೆಗೆ ಹಾವು ಕಚ್ಚಿದ ವ್ಯಕ್ತಿ ಸಂಪೂರ್ಣವಾಗಿ ಸುರಕ್ಷಿತವಾಗಿದ್ದಾರೆ ಎಂದು ವಿಡಿಯೋದ ಕಾಮೆಂಟ್ ವಿಭಾಗದಲ್ಲಿ ಮಾಹಿತಿ ನೀಡಲಾಗಿದೆ.

ಈ ಅಪಾಯಕಾರಿ ವೀಡಿಯೊವನ್ನು Instagram ನಲ್ಲಿ @doktorkobra_official ಹೆಸರಿನ ಖಾತೆಯಿಂದ ಹಂಚಿಕೊಳ್ಳಲಾಗಿದೆ , ಇದನ್ನು ಇಲ್ಲಿಯವರೆಗೆ ಲಕ್ಷ ಜನರು ವೀಕ್ಷಿಸಿದ್ದಾರೆ. ಈ ವಿಡಿಯೋಗೆ ಸಾಕಷ್ಟು ಮಂದಿ ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net