

ನವದೆಹಲಿ: ಮತ್ತು ತರಿಸುವ ಡ್ರಗ್ಸ್ ದುಬಾರಿ ಬೆಲೆಯಿದೆ. ಅದಕ್ಕೆ ಹಣ ಒಟ್ಟು ಮಾಡಲೆಂದೇ ಅನೇಕ ವ್ಯಸನಿಗಳು ಕೆಟ್ಟ ಕೆಲಸಗಳಿಗೆ ಕೈ ಹಾಕಿರುವ ಘಟನೆ ಕೇಳಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ಯುವತಿಯರಿಗೆ ಫ್ರೀಯಾಗಿ ಡ್ರಗ್ಸ್ ಕೊಡುತ್ತಿದ್ದ. ಭಾರತೀಯರಿಗೆ ಡ್ರಗ್ಸ್ ಹಂಚದ ಆತ ಬಾಂಗ್ಲಾದೇಶಿ ಯುವತಿಯರಿಗೆ ಡ್ರಗ್ಸ್ ಹಂಚುತ್ತಿದ್ದ ಹಿಂದಿತ್ತು ಬೇರೆಯದ್ದೇ ಒಂದು ಉದ್ದೇಶ.
ಮಧ್ಯಪ್ರದೇಶದ ವಿಜಯನಗರ ವ್ಯಾಪ್ತಿಯಲ್ಲಿದ್ದ ಸಾಗರ್ ಜೈನ್ ಬಾಂಗ್ಲಾದೇಶದ ಯುವತಿಯರಿಗೆ ಫ್ರೀಯಾಗಿ ಡ್ರಗ್ಸ್ ಹಂಚುತ್ತಿದ್ದ. ಮೊದಮೊದಲು ಉಚಿತವಾಗಿ ಡ್ರಗ್ಸ್ ಹಂಚುತ್ತಿದ್ದ ಆತ ನಂತರ ಅದಕ್ಕೆ ವಿಪರೀತ ಬೆಲೆ ಹೇಳುತ್ತಿದ್ದನಂತೆ. ಆ ಹಣವನ್ನು ಯುವತಿಯರು ಕೊಡಲಾಗದಿದ್ದಾಗ ಅವರನ್ನು ಭಾರತಕ್ಕೆ ಕರೆಸಿಕೊಳ್ಳುತ್ತಿದ್ದ. ವಿಜಯನಗರಕ್ಕೆ ಕರೆಸಿಕೊಂಡು ಅವರಿಗೆ ಡ್ರಗ್ಸ್ ಕೊಟ್ಟು, ಸೆಕ್ಸ್ ದಂಧೆಗೆ ಬಳಸಿಕೊಳ್ಳುತ್ತಿದ್ದ. ಇದೇ ರೀತಿ ಸುಮಾರು 15ಕ್ಕೂ ಹೆಚ್ಚು ಯುವತಿಯರಿಗೆ ಆತ ಮೋಸ ಮಾಡಿದ್ದಾನೆ.
ವಿಜಯನಗರ ಭಾಗದಲ್ಲಿ ಇಂತಹ ಘಟನೆ ನಡೆಯುತ್ತಿರುವ ಸುಳಿವು ಸಿಕ್ಕ ಪೊಲೀಸರು ಸಾಗರ್ಗಾಗಿ ಬಲೆ ಬೀಸಿದ್ದಾರೆ. ಒಂದು ತಿಂಗಳ ಹಿಂದೆ ಆತನ ಮನೆ ಮತ್ತು ಆತನಿಗೆ ಸಂಬಂಧಪಟ್ಟ ಕೆಲ ಸ್ಥಳಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ ಈ ಸಮಯದಲ್ಲಿ ಆತ ಪೊಲೀಸರಿಂದ ತಪ್ಪಿಸಿಕೊಂಡು ದೆಹಲಿ ಸೇರಿಬಿಟ್ಟಿದ್ದಾನೆ.
ದೆಹಲಿಯ ತನ್ನ ಗೆಳತಿ ಮನೆಯಲ್ಲಿ ಅಡಗಿದ್ದ ಸಾಗರ್ನನ್ನು ಬುಧವಾರದಂದು ಪೊಲೀಸರು ಬಂಧಿಸಿದ್ದಾರೆ. ದೆಹಲಿ ಪೊಲೀಸರ ಸಹಾಯದೊಂದಿಗೆ ವಿಜಯನಗರ ಪೊಲೀಸರು ಸಾಗರ್ನನ್ನು ಹುಡುಕಿದ್ದಾಗಿ ಹೇಳಲಾಗಿದೆ. (ಏಜೆನ್ಸೀಸ್)