ಮೀನಿನ ಜತೆ ವಾಕ್ ಹೊರಟವನ ಬಂಧನ; ಇದು ಚಿತ್ರ ವಿ-ಚಿತ್ರ ದುನಿಯಾ

sudina 3
Published on

ನವದೆಹಲಿ: ಮನುಷ್ಯರು ವಾಕಿಂಗ್​ಗೆ ಹೋಗುವುದು ಸಾಮಾನ್ಯ. ಕೆಲವರು ನಾಯಿಯನ್ನೂ ವಾಕಿಂಗ್​ಗೆ ಕರೆದೊಯ್ಯುತ್ತಾರೆ. ಆದರೆ ಸ್ಪೇನ್​ನ ಒಬ್ಬಾತ ಲಾಕ್​ಡೌನ್ ಅವಧಿಯಲ್ಲಿ ಮೀನನ್ನು ವಾಕಿಂಗ್ ಕರೆದೊಯ್ಯುತ್ತಿದ್ದ. ಹೀಗಾಗಿ ಪೊಲೀಸರ ಬಂಧನಕ್ಕೆ ಒಳಗಾಗಿದ್ದಾನೆ.

ಲಾಕ್​ಡೌನ್ ವೇಳೆ ಜನ ಮನೆಯಿಂದ ಹೊರಬರದಂತೆ ಉತ್ತರ ಸ್ಪೇನ್​ನಲ್ಲಿ ಡಂಗುರ ಸಾರಿದ ನಂತರವೂ ಒಬ್ಬಾತ ಗಾಜಿನ ಬೌಲ್​ನಲ್ಲಿ ಮೀನೊಂದನ್ನು ಹಾಕಿಕೊಂಡು ವಾಕಿಂಗ್​ಗೆ ಹೋಗುತ್ತಿದ್ದ. ಹೀಗಾಗಿ ಅ ವ್ಯಕ್ತಿಯನ್ನು ಸ್ಪೇನ್ ಪೊಲೀಸರು ಬಂಧಿಸಿದ್ದು, ಟ್ವಿಟರ್ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net