

ಮುಂಬೈ: ಹಬ್ಬ ಹರಿದಿನಗಳಲ್ಲಿ ಬಸ್, ರೈಲು(Train) ಪ್ರಯಾಣ ತುಂಬಾ ಕಷ್ಟ. ನೂಕು ನುಗ್ಗಲಿನಲ್ಲಿ ಹರಸಾಹಸ ಪಟ್ಟು ಸೀಟ್ಗಳನ್ನು ಹಿಡಿಯಬೇಕಾಗುತ್ತದೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಹುಡುಗ ಮತ್ತು ಮಹಿಳೆಯನ್ನು ರೈಲಿನ ಎಮರ್ಜೆನ್ಸಿ ಎಕ್ಸಿಟ್ ಕಿಟಕಿ ಮೂಲಕ ಹತ್ತಿಸಿದ್ದಾನೆ. ಪ್ರಸ್ತುತ, ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋವನ್ನು @BewithTamanna ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಇರುವಂತೆ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ರೈಲನ್ನು ನಿಲ್ಲಿಸಲಾಗಿದೆ. ಅನೇಕ ಪ್ರಯಾಣಿಕರು ಇದನ್ನು ಹತ್ತಲು ಹರಸಾಹಸ ಪಡುತ್ತಿದ್ದಾರೆ. ಆಗ ವ್ಯಕ್ತಿಯೊಬ್ಬ ಬಾಲಕನನ್ನು ತುರ್ತು ಕಿಟಕಿಯ ಮೂಲಕ ರೈಲಿನೊಳಗೆ ತಳ್ಳಿದ್ದಾನೆ. ಬಳಿಕ ಅಲ್ಲಿಯೇ ನಿಂತಿದ್ದ ಮಹಿಳೆಯನ್ನು ಎತ್ತಿಕೊಂಡು ರೈಲಿನೊಳಗೆ ಹಾಕಿದ್ದಾನೆ. ನಂತರ ಅವರ ಲಗೇಜ್ ಬ್ಯಾಗ್ ಗಳನ್ನೂ ಒಂದೊಂದಾಗಿ ಅದೇ ಕಿಟಕಿಯ ಮೂಲಕ ಒಳಗೆ ಸೇರಿಸಿದ್ದಾನೆ. ಆಗ ಸಹ ಪ್ರಯಾಣಿಕನೊಬ್ಬ ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾನೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅತಿ ಕಡಿಮೆ ಸಮಯದಲ್ಲಿ ಸಾವಿರಾರು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಈ ವಿಡಿಯೋಗೆ ನೆಟಿಜನ್‌ಗಳು 'ಹೀಗೆ ರೈಲು ಹತ್ತುತ್ತೀರಾ?', 'ಅವನು ತನ್ನ ಜನರನ್ನು ಹತ್ತಿಸಿದ, ಇನ್ನು ಅವನು ಆ ರೈಲು ಹತ್ತಬಹುದೇ?', `ಸಾಕಷ್ಟು ರೈಲುಗಳು ಇಂದಿಗೂ ಇಲ್ಲ'', ``ಅವನು ಟಿಕೆಟ್ ತೆಗೆದುಕೊಂಡಿದ್ದಾನಾ'', ``ಆಸನಕ್ಕಾಗಿ ಏನು ಬೇಕಾದರೂ ಮಾಡುತ್ತಾನೆಯೇ'' ಎಂದು ನಾನಾ ರೀತಿಯಲ್ಲಿ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.