ಇಂಡಿಗೋ ವಿಮಾನದೊಳಗೆ ತುರ್ತು ನಿರ್ಗಮನ ತೆರೆಯಲು ಯತ್ನ; ಪ್ರಯಾಣಿಕ ಬಂಧನ

Untitled design - 2023-09-21T202457.435
Published on

ಚೆನ್ನೈ: ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊರ್ವ ಗಾಳಿಯಲ್ಲಿ ತುರ್ತು ನಿರ್ಗಮನದ ಬಾಗಿಲನ್ನು ತೆರೆಯಲು ಪ್ರಯತ್ನಿಸಿದ್ದಾನೆ. ಇದನ್ನು ಗಮನಿಸಿದ ವಿಮಾನ ಸಿಬ್ಬಂದಿ ಆತನ ವಿರುದ್ಧ ದೂರು ನೀಡಿದ್ದು, ಪೊಲೀಸರು ಇದೀಗ ವ್ಯಕ್ತಿಯನ್ನು ಬಂಧಿಸಿದ್ದಾರೆ.

180 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ 6E-457 ಇಂಡಿಗೋ ವಿಮಾನ ಗುರುವಾರ ಗುವಾಹಟಿಯಿಂದ ಅಗರ್​​ತಲಾಗೆ ಪ್ರಯಾಣಿಸುತ್ತಿತ್ತು. ವಿಮಾನವು ಪ್ರಯಾಣಿಸುತ್ತಿದ್ದ ವೇಳೆ ತುರ್ತು ಬಾಗಿಲಿನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಏಕಾಏಕಿ ಅದನ್ನು ತೆರೆಯಲು ಪ್ರಯತ್ನಿಸಿದ್ದಾನೆ. ಆತನ ಪಕ್ಕದಲ್ಲಿದ್ದ ಸಹ ಪ್ರಯಾಣಿಕರೊಬ್ಬರು ಆತನನ್ನು ತಡೆಯಲು ಯತ್ನಿಸಿದರೂ, ಬಾಗಿಲು ತೆರೆಯಲು ತನ್ನ ಪ್ರಯತ್ನವನ್ನು ಮುಂದುವರಿಸಿದ್ದ ಎಂದು ಹೇಳಲಾಗಿದೆ.

ಇದನ್ನು ಗಮನಿಸಿದ ಫ್ಲೈಟ್ ಅಟೆಂಡೆಂಟ್‌ಗಳು ಕೂಡಲೇ ಆತನನ್ನು ತಡೆಯುವ ಪ್ರಯತ್ನ ಮಾಡಿದ್ದು, ಕಿಟಿಕಿಯಿಂದ ಸೀಟಿನ ಪಕಕ್ಕೆ ಎಳೆದು ಕೂರಿಸಿದ್ದಾರೆ. ಸದ್ಯ ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಪ್ರಯಾಣಿಕನನ್ನು ಬಿಸ್ವಜಿತ್ ದೇಬನಾಥ್ ಎಂದು ಗುರುತಿಸಲಾಗಿದ್ದು, ವಿಮಾನವನ್ನು ಅಗರ್ತಲಾದಲ್ಲಿ ಲ್ಯಾಂಡಿಂಗ್​ ಮಾಡಿದ ಬಳಿಕ ಬಂಧಿಸಲಾಗಿದೆ.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆತ ಮಾದಕ ಮಾತ್ರೆ ಸೇವಿಸಿರುವುದು ಬೆಳಕಿಗೆ ಬಂದಿದೆ. ವಿಮಾನ ಚೆನ್ನೈ ಏರ್​ಪೋರ್ಟ್​ಗೆ ಇಳಿದ ನಂತರ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (CISF) ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net