

ಮಧ್ಯಪ್ರದೇಶ: ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ರೈಲಿನ ಬೋಗಿಯ (ಕೆಳಗಡೆ ಅಪಾಯಕಾರಿ) ಚಕ್ರಗಳ ನಡುವೆ(ಟ್ರಾಲಿ) ಮಲಗಿಕೊಂಡು ಬರೊಬ್ಬರಿ 290 ಕಿ.ಮೀ ದೂರ ಪ್ರಯಾಣಿಸಿದ ಅಘತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಇಟಾರ್ಸಿಯಿಂದ ಎಂಬ ಪ್ರದೇಶದಿಂದ ಬಂದಿದ್ದ ರೈಲು ಜಬಲ್ಪುರದಲ್ಲಿ ನಿಲ್ಲಿಸಿದಾಗ, ಕ್ಯಾರೇಜ್ ಮತ್ತು ವ್ಯಾಗನ್(C&W) ಸಿಬ್ಬಂದಿ ರೈಲಿನ ರೋಲಿಂಗ್(ಚಕ್ರಗಳ ತಪಾಸಣೆ ) ನಡೆಸುವಾಗ ಈ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಈ ವ್ಯಕ್ತಿಯು ಕೋಚ್ ಕೆಳಗಿನ ಟ್ರಾಲಿಯಲ್ಲಿ ಮಲಗಿರುವುದು ಸಿಬ್ಬಂದಿಗೆ ಆಚ್ಚರಿ ತರಿಸಿದೆ. ಅಲ್ಲದೇ, ಆ ವ್ಯಕ್ತಿಯನ್ನು ಟ್ರಾಲಿಯಿಂದ ಹೊರ ತರುತ್ತಿರುವ ವಿಡಿಯೋಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ವ್ಯಕ್ತಿಯನ್ನು ರೈಲ್ವೆ ರಕ್ಷಣಾ ಪಡೆ(ಆರ್ಪಿಎಫ್) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವ್ಯಕ್ತಿಯ ಹೆಸರು ಬಹಿರಂಗಪಡಿಸಿಲ್ಲ. ಇಟಾರ್ಸಿಯಲ್ಲಿ ರೈಲು ಬೋಗಿಯ ಟ್ರಾಲಿಯಲ್ಲಿ ಹತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ, ತಾನು ಮದ್ಯವೆಸನಿಯಾಗಿದ್ದು, ಕುಡಿದು ಟ್ರೈಮ್ ಹತ್ತಿದ್ದೇನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ಹೆಚ್ಚಿನ ಮಾಹಿತಿನಯನ್ನು ಕಲೆ ಹಾಕುತ್ತಿದ್ದಾರೆ ಎಂದು ವರದಿ ಉಲ್ಲೇಖಿಸಿವೆ.
ಇನ್ನೂ ರೈಲಿನ ಟ್ರಾಲಿಯಿಂದ ಹೊರ ಬರುತ್ತಿರುವ ವ್ಯಕ್ತಿಯ ವಿಡಿಯೋ ವೈರಲ್ ಆಗಿದ್ದು, ಈ ಘಟನೆಯ ಬಗ್ಗೆ ರೈಲ್ವೆ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಇಂತಹ ಅಜಾಗರೂಕ ಕೃತ್ಯಗಳಿಂದ ಪ್ರಯಾಣಿಕರಿಗೆ ಮತ್ತು ರೈಲ್ವೆ ಸಿಬ್ಬಂದಿಗೆ ಇಬ್ಬರಿಗೂ ಅಪಾಯ ಹೆಚ್ಚು ಎಂದಿದ್ದಾರೆ,(ಏಜೆನ್ಸೀಸ್).