10 ರೂ. ಕೇಳಿದ ಎಂಬ ಕಾರಣಕ್ಕೆ ಮಗನ ಕತ್ತು ಹಿಸುಕಿ ಕೊಂದ ಪಾಪಿ ತಂದೆ!

Jharkhand murder
Published on

ರಾಂಚಿ: ಆಘಾತಕಾರಿ ಘಟನೆಯೊಂದರಲ್ಲಿ 10 ರೂ. ಕೇಳಿದ ಎಂಬ ಕಾರಣಕ್ಕೆ ತಂದೆಯೇ ತನ್ನ ಮಗನ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಜಾರ್ಖಂಡ್​ನ ಚತ್ರ ಜಿಲ್ಲೆಯಲ್ಲಿ ನಡೆದಿದೆ.

ಘಟನೆಯು ಬಶಿಷ್ಟನಗರ ಪೊಲೀಸ್​ ಠಾಣೆ ವ್ಯಾಪ್ತಿಯ ಕರೈಲಿಬಾರ್​ ಪ್ರದೇಶದಲ್ಲಿ ನಡೆದಿದ್ದು, ಮೃತ ದುರ್ದೈವಿಯನ್ನು ಪಪ್ಪು ಕುಮಾರ್​(12), ಬಂಧಿತ ಆರೋಪಿಯನ್ನು ಬಿಲೇಶ್​ ಭೂಯಾನ್​(48) ಎಂದು ಗುರುತಿಸಲಾಗಿದೆ.

Strangle
ಸಾಂದರ್ಭಿಕ ಚಿತ್ರ

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಬಶಿಷ್ಟನಗರ ಪೊಲೀಸ್​ ಠಾಣಾಧಿಕಾರಿ ಗುಲಾಂ ಸರ್ವಾರ್​ ಘಟನೆಯೂ ಬೆಳಗ್ಗೆ 9 ಘಂಟೆ ಸುಮಾರಿಗೆ ನಡೆದಿದ್ದು, ಕುಡಿದ ಮತ್ತಿನಲ್ಲಿ ಬಾಲಕನ ಪೋಷಕರಿಬ್ಬರು ಜಗಳವಾಡುತ್ತಿದ್ದರು. ಈ ವೇಳೆ ಪಪ್ಪು ಕುಮಾರ್​ ತನ್ನ ತಂದೆಯ ಬಳಿ 10 ರೂ. ಕೇಳಿದ್ದಾನೆ. ಇದರಿಂದ ಸಿಟ್ಟಿಗೆದ್ದ ಆರೋಪಿಯೂ ತನ್ನ ಮಗನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಮೃತ ಬಾಲಕನ ಸಹೋದರಿ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿ ಮನೆಗ ವಾಪಸ್​ ಆದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಆಕೆ ಅಲಾರಾಮ್​ ಹೊಡೆದು ವಿಚಾರವನ್ನು ನೆರೆ ಹೊರೆಯವರಿಗೆ ತಿಳಿಸಿದ್ದಾಳೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಬಶಿಷ್ಟನಗರ ಪೊಲೀಸ್​ ಠಾಣಾಧಿಕಾರಿ ಗುಲಾಂ ಸರ್ವಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net