ಡಿವೋರ್ಸ್​ ಕೇಳಿದ ಪತ್ನಿಗೆ ಪತಿ ಕೊಟ್ಟಿದ್ದು ಶಾಕ್​: ತಲೆಮರೆಸಿಕೊಂಡಿದ್ದವನಿಗೂ ತಪ್ಪದ ಆಘಾತ!

Man stab
Published on

ಲಂಡನ್​: ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಇಂಗ್ಲೆಂಡ್​ನಲ್ಲಿ ನಡೆದಿದ್ದು, ತಾಯಿ ಕೊಂದಿದ್ದಕ್ಕೆ ಆರೋಪಿ ತಂದೆಯೊಂದಿಗೆ 12 ವರ್ಷದ ಮಗಳು ಜಗಳಕ್ಕಿಳಿದ ಕತೆಯೊಂದು ಮನಕಲಕುವಂತಿದೆ.

ಈ ಘಟನೆ 2019ರ ಜುಲೈನಲ್ಲಿ ಇಂಗ್ಲೆಂಡಿನ ನ್ಯೂಹ್ಯಾಂಪ್​ಶೈರ್​ನಲ್ಲಿರುವ ಕಾಂಕಾರ್ಡ್​ ನಗರದ ಕಾಂಪ್ಲೆಕ್ಸ್​ನಲ್ಲಿ ನಡೆದಿತ್ತು. ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ತದನಂತರದಲ್ಲಿ ಸಿಕ್ಕಿಬಿದ್ದಿದ್ದು, ಕೋರ್ಟ್​ ಮುಂದೆ ಇದೀಗ ತಪ್ಪೊಪ್ಪಿಕೊಂಡಿದ್ದಾನೆ.

ಆರೋಪಿಯನ್ನು ಎಮರ್ಸನ್​ ಫಿಗ್ಯುರೆಡೋ (42) ಎಂದು ಗುರುತಿಸಲಾಗಿದೆ. ಪತ್ನಿ ನಾಥಲಿಯಾ ಡಾ ಪೈಕ್ಸಾವೊಳನ್ನು ಕೊಲೆ ಮಾಡಿ ಪರಾರಿಯಾಗಿದ್ದ. ಇದಕ್ಕೂ ಮುನ್ನ ತಾಯಿಯನ್ನು ಉಳಿಸಿಕೊಳ್ಳಲು 12 ವರ್ಷದ ಬಾಲಕಿ ಸಾಕಷ್ಟು ಪ್ರಯತ್ನ ಮಾಡಿದರೂ ತಂದೆಯ ಕ್ರೌರ್ಯವನ್ನು ತಡೆಯಲು ಸಾಧ್ಯವಾಗಲಿಲ್ಲ. ಅಲ್ಲದೆ, ತಾಯಿ ಕೊಂದ ಕೋಪಕ್ಕೆ ತಂದೆಯೊಂದಿಗೆ ಜಗಳಕ್ಕಿಳಿದು ಆಕೆಯು ಸಹ ತಂದೆಯ ಕ್ರೌರ್ಯಕ್ಕೆ ಗಾಯಗೊಂಡಿದ್ದಳು.

ಒಬ್ಬ ವ್ಯಕ್ತಿಯನ್ನು ನಿಂದಿಸುತ್ತಾ ಇದ್ದರೆ ಅಂಥವರು ಬದುಕಬೇಕಿಲ್ಲ ಎಂದು ಆರೋಪಿ ತನ್ನ ಮಗಳ ಮುಂದೆ ಹೇಳಿದ್ದನೆಂದು ವಕೀಲರು ಮಾಹಿತಿ ನೀಡಿದ್ದಾರೆ. ಡಿವೋರ್ಸ್​ ಪಡೆದುಕೊಳ್ಳಲು ಬಯಸಿರುವುದಾಗಿ ಹೆಂಡತಿ ಹೇಳಿದ್ದಕ್ಕೆ ಕೋಪಗೊಂಡ ಫಿಗ್ಯುರೆಡೋ ಚಾಕು ಕಸಿದುಕೊಂಡು ಇಬ್ಬರು ಮಕ್ಕಳು ಎದುರೇ ಚುಚ್ಚಿ ಕೊಲೆ ಮಾಡಿದ್ದಾನೆಂದು ಹೇಳಲಾಗಿದೆ.

ಇದಕ್ಕೂ ಮುನ್ನ ಇಬ್ಬರ ನಡುವೆ ಜಗಳವೂ ನಡೆದಿದ್ದು, ಒಬ್ಬರಿಗೊಬ್ಬರು ತಮ್ಮ ನಿಶ್ಚಿತಾರ್ಥ ರಿಂಗ್​ಗಳನ್ನು ಎಸೆದಾಡಿದ್ದಾರೆ. ಈ ಹಿಂದೆ ಎಂದಿಗೂ ನಾವು ತಂದೆಯನ್ನು ಇಷ್ಟೊಂದು ಕೋಪದಲ್ಲಿದ್ದಾಗ ನೋಡಿರಲಿಲ್ಲ ಎಂದು ಮಕ್ಕಳು ಹೇಳಿರುವುದಾಗಿ ವಕೀಲರು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿದ ಬಳಿಕ ಬಂಧನವಾಗಿದ್ದ ಆರೋಪಿ ಫಿಗ್ಯುರೆಡೋ ಇದೀಗ 45 ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net