6 ಪತ್ನಿಯರ ಜತೆ ಮಲಗಲು ಹಾಸಿಗೆಗಾಗಿ 81 ಲಕ್ಷ ರೂ. ಖರ್ಚು ಮಾಡಿದ ಭೂಪ!

Man Spends Rs 81 Lakh
Published on

ಬ್ರೆಜಿಲ್​​: ಪತಿಯನ್ನು ಯಾರೊಂದಿಗೂ ಹಂಚಿಕೊಳ್ಳಲು ಮಹಿಳೆಯರು ಇಚ್ಚಿಸುವುದಿಲ್ಲ. ಆದರೆ ಬ್ರೆಜಿಲ್​ನಲ್ಲಿ 6 ಮಂದಿ ಮಹಿಳೆಯರು ಒಬ್ಬ ಪುರುಷನ ಜೊತೆಗೆ ಸಂಸಾರ ಮಾಡುತ್ತಿದ್ದಾರೆ. ಈ ಪತಿರಾಯ ತನ್ನ ಆರು ಹೆಂಡ್ತಿರ ಜೊತೆ ಒಟ್ಟಿಗೆ ಮಲಗೋಕೆ ಭರ್ತಿ 81 ಲಕ್ಷ ಖರ್ಚು ಮಾಡಿದ್ದಾನೆ. ಈ ವಿಚಾರವನ್ನು ಆತನೇ ಹಂಚಿಕೊಂಡಿದ್ದಾನೆ.

ಜಿಲ್‌ನ ಸಾವೊ ಪಾಲೊದ ನಿವಾಸಿ ಆರ್ಥರ್ ವೊರ್ಸೊ ಅವರಿಗೆ ಒಟ್ಟು 9 ಹೆಂಡತಿಯರಿದ್ದರಂತೆ. ಈ ಪೈಕಿ ಮೂವರಿಗೆ ವಿಚ್ಛೇದನ ನೀಡಿದ್ದಾನೆ. ಈಗ 6 ಜನ ಹೆಂಡತಿಯರ ಜೊತೆಗೆ ಸಂಸಾರ ಮಾಡುತ್ತಿದ್ದಾನೆ. ಈತನಿಗೆ ಒಂದು ಚಿಂತೆ ಕಾಡುತ್ತಿತ್ತು. ಇದಕ್ಕೆ ಪರಿಹಾರ ಸಿಕ್ಕಿರುವುದಾಗಿ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಾನು ಅನೇಕ ಬಾರಿ ಸೋಫಾ, ನನ್ನ ಬಳಿ ಇದ್ದ ಡಬಲ್ ಬೆಡ್ ಅನ್ನು ಹಂಚಿಕೊಳ್ಳಬೇಕಾಗಿತ್ತು ಮತ್ತು ನನ್ನ ಹೆಂಡತಿಯರಿಗೆ ಸ್ಥಳಾವಕಾಶ ಕಲ್ಪಿಸಲು ನೆಲದ ಮೇಲೆ ಮಲಗಬೇಕಾಗಿತ್ತು. ಹೀಗಾಗಿ ಇಂಥಾ ದೊಡ್ಡ ಹಾಸಿಗೆಯನ್ನು ಸಿದ್ಧಪಡಿಸಿಕೊಂಡಿದ್ದೇನೆ ಎಂದಿದ್ದಾರೆ.

ಆರ್ಥರ್ ತನ್ನ ಹ್ಯಾಂಡಲ್‌ನಲ್ಲಿ 20 ಅಡಿ ಹಾಸಿಗೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಶೀರ್ಷಿಕೆಯಾಗಿ 'ಸಂಬಂಧದಲ್ಲಿ ಕೆಲವು ಕೆಟ್ಟ ಅನುಭವವಾದ ನಂತರ, ನಾನು ಅನೇಕರಿಗೆ ಅಸಾಧ್ಯವಾದುದನ್ನು ವಾಸ್ತವಕ್ಕೆ ತರಲು ಪ್ರಯತ್ನಿಸಿದೆ. ವಿಶ್ವದ ಅತಿದೊಡ್ಡ ಹಾಸಿಗೆಯನ್ನು ಸಿದ್ಧಪಡಿಸಿಕೊಂಡೆ' ಎಂದು ಬರೆದುಕೊಂಡಿದ್ದಾರೆ.

ಹಾಸಿಗೆ ವಿಶೇಷತೆ?: ಆರು ಪತ್ನಿಯರನ್ನು ಹೊಂದಿರುವ ಬ್ರೆಜಿಲಿಯನ್ ವ್ಯಕ್ತಿಯೊಬ್ಬರು 20 ಅಡಿ ಹಾಸಿಗೆ ಸಿದ್ಧಪಡಿಸಲು 81.54 ಲಕ್ಷ ರೂ. ಖರ್ಚು ಮಾಡಿದ್ದಾರೆ. ಇದರಿಂದ ಅವರು ಎಲ್ಲಾ ಪಾಲುದಾರರೊಂದಿಗೆ ಒಟ್ಟಿಗೆ ಮಲಗಬಹುದು. ದೈತ್ಯ ಹಾಸಿಗೆಯನ್ನು ನಿರ್ಮಿಸಲು ಇದು 15 ತಿಂಗಳುಗಳನ್ನು ತೆಗೆದುಕೊಂಡಿದೆ. 12 ಜನರ ತಂಡ ಮತ್ತು 950 ಸ್ಕ್ರೂಗಳನ್ನು ಬಳಕೆ ಮಾಡಲಾಗಿದೆ.

ಆರ್ಥರ್ ಈ ಹಿಂದೆ ತನ್ನ ಎಲ್ಲಾ ಹೆಂಡತಿಯರೊಂದಿಗೆ ಮಗುವನ್ನು ಹೊಂದಲು ಬಯಸುತ್ತೇನೆ. ಇದರಿಂದ ಅವರಲ್ಲಿ ಯಾರೂ "ಅಸಮಾಧಾನ" ಹೊಂದುವುದಿಲ್ಲ ಎಂದು ಹೇಳುವ ಮೂಲಕವಾಗಿ ಈ ಸುದ್ದಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net