ಥಿಯೇಟರ್​​ ಒಳಗೆ ಹೊರಗಿನ ಆಹಾರವನ್ನು ಸವಿದ ಯುವಕ; ಈ ಐಡಿಯಾ ಈಗ ಎಲ್ಲೆಡೆ ವೈರಲ್..!

food
Published on

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮಧ್ಯಮ ವರ್ಗದ ಜನರು ಥಿಯೇಟರ್‌ಗಳಿಗೆ ಹೋಗಿ ಸಿನಿಮಾ ನೋಡಲು ಹೆದರುತ್ತಿದ್ದಾರೆ. ಏಕೆಂದರೆ ತಿಂಡಿಗಳ ಬೆಲೆ ಟಿಕೆಟ್ ದರಕ್ಕಿಂತ ಮೂರರಿಂದ ನಾಲ್ಕು ಪಟ್ಟು ಹೆಚ್ಚು. ಪಾಪ್ ಕಾರ್ನ್ ಬೆಲೆ 100 ರೂ., ತಂಪು ಪಾನೀಯಕ್ಕೆ 60 ರೂ. ಚಿಕ್ಕ ಸಮೋಸಾ ಬೆಲೆ 15 ರೂ. ಹೀಗೆ ಹೇಳುತ್ತಾ ಹೋದರೆ ಕಣ್ಣುಗಳು ಗುಡ್ಡೆ ತಿರುಗುತ್ತದೆ. ಈ ಬೆಲೆಗಳಿಂದಾಗಿ ಅನೇಕರು ಥಿಯೇಟರ್‌ಗಳಿಗೆ ಹೋಗುವುದನ್ನು ನಿಲ್ಲಿಸಿದರೂ ಆಶ್ಚರ್ಯವಿಲ್ಲ.

"ಹೇಗಿದ್ದರೂ ಸಿನಿಮಾಗಳು ಬಿಡುಗಡೆಯಾದ ಎರಡರಿಂದ ಮೂರು ವಾರಗಳಲ್ಲಿ ಒಟಿಟಿಗೆ ಬರಲಿವೆ. ದುಡ್ಡು ಕೊಟ್ಟು ಥಿಯೇಟರ್‌ಗೆ ಹೋಗುವ ಬದಲು ಮನೆಯವರೆಲ್ಲ ಸೇರಿ ಮನೆಯಲ್ಲೇ ಕುಳಿತು ಸಿನಿಮಾ ನೋಡುವುದು ಉತ್ತಮ'' ಎಂಬುದು ಅನೇಕ ವೀಕ್ಷಕರ ಅಭಿಪ್ರಾಯ.

ಅಂದಹಾಗೆ ಇತ್ತೀಚೆಗಷ್ಟೇ ಅಲ್ಪೇಶ್ ಎಂಬ ಹುಡುಗ ಥಿಯೇಟರ್‌ಗಳಲ್ಲಿ ತಿಂಡಿ ತಿನಿಸುಗಳ ದುಬಾರಿ ಬೆಲೆಯನ್ನು ನೋಡಿ ಒಂದೊಳ್ಳೆ ಐಡಿಯಾ ಮಾಡಿದನು. ಥಿಯೇಟರ್​​​​ಗೆ ಹೋಗುವ ಮುನ್ನ ಎರಡು ಚಿಪ್ಸ್ ಪ್ಯಾಕೆಟ್, ಒಂದಿಷ್ಟು ತಿಂಡಿ, ತಂಪು ಪಾನೀಯದ ಬಾಟಲಿಯನ್ನು ಶೂ ಬಾಕ್ಸ್ ನಲ್ಲಿ ನೀಟಾಗಿ ಪ್ಯಾಕ್ ಮಾಡಿದ. ಅದಕ್ಕೆ ಒಳ್ಳೆ ಪ್ಲಾಸ್ಟರ್ ಹಾಕಿ ಒಳ್ಳೆ ಚೀಲಕ್ಕೆ ಹಾಕಿಕೊಳ್ಳುತ್ತಾನೆ. ಥಿಯೇಟರ್‌ಗೆ ಹೋಗುವ ಮುನ್ನ ಸೆಕ್ಯುರಿಟಿ ಚೆಕ್‌ ಪಾಯಿಂಟ್‌ ಬಳಿ ಶಾಪಿಂಗ್‌ಗೆ ಹೋಗುತ್ತಿದ್ದೆ ಎನ್ನುತ್ತಾರೆ ಅವರು. ತಪಾಸಣೆ ಸಿಬ್ಬಂದಿ ಕೂಡ ಪ್ಯಾಕ್ ಮಾಡಿದ ಪೆಟ್ಟಿಗೆಯನ್ನು ನೋಡಿ, ಥಿಯೇಟರ್ ಒಳಗೆ ಅನುಮತಿಸುತ್ತಾರೆ. ನಂತರ ಅಲ್ಪೇಶ್ ಒಳ್ಳೆಯ ತಿಂಡಿ ತಿಂದು ಕೂಲ್ ಡ್ರಿಂಕ್ಸ್ ಕುಡಿದು ಸಿನಿಮಾ ನೋಡಿ ಖುಷಿ ಪಡುತ್ತಾನೆ.

ಅಕ್ಷಯ್ ಕುಮಾರ್ ಅಭಿನಯದ 'OMG 2' ಚಿತ್ರ ವೀಕ್ಷಿಸಲು ತೆರಳಿದ್ದ ಅಲ್ಪೇಶ್, ಹೊರಗಿನ ಆಹಾರವನ್ನು ಬುದ್ಧಿವಂತಿಕೆಯಿಂದ ತಿನ್ನುತ್ತಾ ಖುಷಿಯಿಂದ ಸಿನಿಮಾ ವೀಕ್ಷಿಸಿದರು. ಈ ವಿಡಿಯೋವನ್ನು ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. "ನಾನು ಇದನ್ನು ಜೀನಿಯಸ್ ಹ್ಯಾಕ್ ಎಂದು ಕರೆಯುತ್ತೇನೆ" ಎಂದು ಅವರು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಇಲ್ಲಿಯವರೆಗೆ 35 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಎರಡು ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಈ ವೈರಲ್ ವಿಡಿಯೋಗೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಪ್ರತಿಕ್ರಿಯಿಸಿದೆ.

ತಿಂಡಿ ತಿನಿಸುಗಳನ್ನು ಥಿಯೇಟರ್ ಒಳಗೆ ತಂದ ಯುವಕನನ್ನು ನೆಟ್ಟಿಗರು ಹೊಗಳುತ್ತಿದ್ದಾರೆ. “ಈ ತಂತ್ರ ಚೆನ್ನಾಗಿದೆ. ನಾನು ಇಲ್ಲಿಯವರೆಗೆ 3 ಬಾರಿ ಪ್ರಯತ್ನಿಸಿದೆ. ನಾನು ಯಶಸ್ವಿಯಾಗಿದ್ದೇನೆ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ "ನಾನು ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ ಎಂದರೆ, ಕೆಲವರು "PVR, INOX ಈ ರೀಲ್ ಅನ್ನು ನೋಡುತ್ತದೆ. ಆಗ ಅವರಿಗೆ ನಿಜವಾದ ವಿಷಯ ತಿಳಿಯುತ್ತದೆ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net