

ಬೆಂಗಳೂರು: ನೀವು ಅಪರೂಪಕ್ಕೆ ನಿಮ್ಮ ಪ್ರೀತಿಪಾತ್ರರ ಜೊತೆ ರೆಸ್ಟೋರೆಂಟ್‌ಗೆ ಹೋದಾಗ ಗೂಳಿ ಇದ್ದಕ್ಕಿದ್ದಂತೆ ಅಲ್ಲಿಗೆ ಬಂದರೆ ಏನಾಗುತ್ತದೆ? ಈಗ್ಯಾಕೆ ಈ ಪ್ರಶ್ನೆ ಅಂತೀರಾ..? ಸದ್ಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಸಿಟ್ಟಿಗೆದ್ದ ಗೂಳಿಯೊಂದು ಇದ್ದಕ್ಕಿದ್ದಂತೆ ರೆಸ್ಟೊರೆಂಟ್‌ಗೆ ನುಗ್ಗಿರುವುದನ್ನು ನೀವು ನೋಡಬಹುದು, ಹಾಗೆಯೇ ಅದು ಏನು ಮಾಡುತ್ತದೆ ಎಂಬುದನ್ನು ನೋಡಿದರೆ ಖಂಡಿತ ನೀವು ಭಯಭೀತರಾಗಬಹುದು. ಇದು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಅತಿ ಹೆಚ್ಚು ವೈರಲ್ ಆಗಿದೆ.
ವಿಡಿಯೋದಲ್ಲಿ ಕೋಪಗೊಂಡ ಗೂಳಿ ರೆಸ್ಟೋರೆಂಟ್‌ಗೆ ನುಗ್ಗಿ ಜನರ ಮೇಲೆ ದಾಳಿ ಮಾಡುವುದನ್ನು ನೋಡಬಹುದು. ಮೊದಲಿಗೆ ಅದು ಮೇಜಿನ ಬಳಿ ಕುಳಿತವರ ಮೇಲೆ ದಾಳಿ ಮಾಡುತ್ತದೆ, ಆ ನಂತರ ಇನ್ನೊಬ್ಬ ವ್ಯಕ್ತಿಯನ್ನು ಬಲವಾಗಿ ಹೊಡೆಯುತ್ತದೆ. ಹೀಗೆ ಅನೇಕರ ಮೇಲೂ ದಾಳಿ ಮಾಡಿ ಕೊಂಬಿನಿಂದ ಹೊಡೆಯುತ್ತದೆ. ವಿಡಿಯೋ ನೋಡಿದರೆ ಈ ಜನರು ನಂತರ ಗಾಯಗೊಂಡಿರಬೇಕು ಎಂದು ತೋರುತ್ತದೆ. ಆದರೆ ಇದರ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ.
ಈ ವಿಡಿಯೋ ವೈಲ್ಡ್‌ಲೈಫ್ ಅನಿಮಲ್ ಎಂಬ ಖಾತೆಯಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋವನ್ನು ಶೇರ್ ಮಾಡುವಾಗ, 'ನೀವು ಈ ಜಾಗದಲ್ಲಿ ಇದ್ದಿದ್ದರೆ ಏನು ಮಾಡುತ್ತಿದ್ದಿರಿ' ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.