

ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ ಪ್ರಿಯಕರ ಚಲಿಸುವ ಆಟೋದಲ್ಲಿ ತನ್ನ ಪ್ರೇಯಸಿಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಮುಂಬೈನ ಸಾಕಿ ನಾಕಾ ಪ್ರದೇಶದಲ್ಲಿರುವ ಖೈರಾನಿ ರಸ್ತೆಯಲ್ಲಿ ನಡೆದಿದೆ.
ಮೃತರನ್ನು ಪಂಚಶೀಲ ಅಶೋಕ್ ಜಾಮ್ದಾ(30) ಎಂದು ಗುರುತಿಸಲಾಗಿದ್ದು, ಘಟನೆ ನಂತರ ಆರೋಪಿ ಪ್ರಿಯಕರ ಸ್ಥಳದಿಂದ ಪರಾರಿಯಾಗಿದ್ಧಾನೆ. ಆಟೋದಲ್ಲಿ ಸಂಚರಿಸುವ ವೇಳೆ ಇಬ್ಬರ ನಡುವೆ ವಿಚಾರ ಒಂದಕ್ಕೆ ಶುರುವಾದ ಜಗಳದಿಂದ ಕೊಲೆಯಾಗಿದೆ ಎಂದು ಪ್ರತ್ಯಕ್ಷದರ್ಶಿ ಚಾಲಕ ತಿಳಿಸಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಡಿಸಿಪಿ ದತ್ತಾ ನಾಲ್ವಡೆ ಆಟೋದಲ್ಲಿ ಚಲಿಸುವ ವೇಳೆ ಪ್ರೇಮಿಗಳಿಬ್ಬರ ನಡುವೆ ವಿಚಾರ ಒಂದಕ್ಕೆ ಸಣ್ಣದಾಗಿ ಜಗಳ ಅರಂಭವಾಗಿದೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಪ್ರಿಯಕರ ಪ್ರೇಯಸಿಯ ಕತ್ತು ಸೀಳಿ ಕೊಲೆ ಮಾಡಿದ್ಧಾನೆ.
ಆರೋಪಿಯಿಂದ ತಪ್ಪಿಸಿಕೊಳ್ಳಲು ಆಕೆ ಆಟೋದಿಂದ ಎಗರಲು ಯತ್ನಿಸಿದಳು. ಆದರೆ, ಅದ್ಉ ಸಾಧ್ಯವಾಗದೆ ಆಕೆ ಮೃತಪಟ್ಟಿದ್ಧಾಳೆ ಎಂದು ಡಿಸಿಪಿ ದತ್ತಾ ನಾಲ್ವಡೆ ತಿಳಿಸಿದ್ದಾರೆ.