ಸೋದರ ಸಂಬಂಧಿಯನ್ನು ಪ್ರೀತಿಸಿದ ಯುವಕ; ಕುಟುಂಬದವರು ಒಪ್ಪದ ಕಾರಣ ಗುಂಡು ಹಾರಿಸಿಕೊಂಡು ಆತ್ಮಹತ್ಯೆ!

Untitled design - 2023-08-06T195752.125
Published on

ಉತ್ತರಪ್ರದೇಶ: ಸೋದರ ಸಂಬಂಧಿಯನ್ನು ಪ್ರೀತಿಸುತ್ತಿದ್ದ ಯುವಕ, ಯಾರಿಗೂ ತಿಳಿಸದೆ ವಿವಾಹವಾಗಿದ್ದ, ಈ ಸಂಗತಿಯನ್ನು ಕುಟುಂಬದವರು ಒಪ್ಪದ ಹಿನ್ನಲೆ ಗುಂಡು ಹಾರಿಸಿಕೊಂಡು ಸಾವಿಗೀಡಾಗಿರುವ ಘಟನೆ ಉತ್ತರಪ್ರದೇಶದ ರಾಜೇಸುಲ್ತಾನ್‌ಪುರದಲ್ಲಿ ವರದಿಯಾಗಿದೆ.

ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇದೀಗ ಸ್ಥಳೀಯರನ್ನು ಬೆಚ್ಚಿ ಬೀಳಿಸಿದ್ದು, ಮೃತ ವ್ಯಕ್ತಿಯನ್ನು ಇಟೌಲಿ ಖುರ್ದ್ ನಿವಾಸಿ ಸಂದೀಪ್ (30) ಎಂದು ಗುರುತಿಸಲಾಗಿದೆ. ತನ್ನ ಚಿಕ್ಕಮ್ಮನ ಮಗಳನ್ನು ಪ್ರೀತಿಸಿ, ರಹಸ್ಯವಾಗಿ ಮದುವೆಯಾಗಿದ್ದ ಎನ್ನಲಾಗಿದ್ದು, ನಂತರ ಆಕೆಯ ಮನೆಗೆ ಭೇಟಿ ನೀಡಿ, ಆಕೆಯನ್ನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದಾನೆ. ಇದಕ್ಕೆ ಸಂಬಂಧಿಕರು ನಿರಾಕರಿಸಿದ್ದಕ್ಕೆ ಮನನೊಂದ ಆತ, ತಾನು ತಂದಿದ್ದ ಅಕ್ರಮ ಶಸ್ತ್ರಾಸ್ತ್ರದಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೂಡಲೇ ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸಾವನ್ನಪ್ಪುವ ಕೆಲವು ಗಂಟೆಗಳ ಮುನ್ನ ಸಂದೀಪ್ ತನ್ನ ಮದುವೆಯ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದರು ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ. ಸದ್ಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net