ಬಾಯ್ಬಿಟ್ಟರೆ ನಿನ್ನ ತಂಗಿಗೂ ಇದೇ ಗತಿ: ರಾಜಕಾರಣಿ ಪುತ್ರನ ಕರಾಳ ಮುಖ ಬಿಚ್ಚಿಟ್ಟ ಅಪ್ರಾಪ್ತೆ

Political Leader son
Published on

ಹೈದರಾಬಾದ್​: ಅನೇಕ ಸಂದರ್ಭದಲ್ಲಿ ಹದಿನಾರು ವರ್ಷದ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ ಆರೋಪದ ಮೇಲೆ 22 ವರ್ಷದ ಯುವಕನ ವಿರುದ್ಧ ಹೈದರಾಬಾದಿನ ಕುಲುಸ್ಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಯನ್ನು ರೋಹಿತ್​ ಎಂದು ಗುರುತಿಸಲಾಗಿದೆ. ಲವ್​ ಮಾಡಿ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಹುಡುಗಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ತಾನೂ ಮೋಸ ಹೋಗಿದ್ದೇನೆಂದು ಗೊತ್ತಾದ ಬಳಿಕ ಹುಡುಗಿ ಪೊಲೀಸ್ ಠಾಣೆ ಮೆಟ್ಟೆಲೇರಿದ್ದಾಳೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ​

ಅನೇಕ ಬಾರಿ ರೋಹಿತ್​ ನನಗೆ ಬೆದರಿಕೆ ಒಡ್ಡಿದ್ದಾನೆ. ಗೊತ್ತಿಲ್ಲದಂತೆ ನನಗೆ ಮಾದಕ ದ್ರವ್ಯ ನೀಡಿ ನಿರಂತರ ಅತ್ಯಾಚಾರ ಮಾಡಿದ್ದಾನೆ. ಯಾರಿಗಾದರೂ ಹೇಳಿದರೆ ನನ್ನ ತಂಗಿಗೂ ಇದೇ ರೀತಿ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಇನ್ನು ಹುಡುಗಿಯ ಪಾಲಕರು ಪೊಲೀಸರ ವಿರುದ್ಧವೇ ಆರೋಪ ಮಾಡಿದ್ದಾರೆ. ಆರೋಪಿ ರೋಹಿತ್​ ತಂದೆ ಸ್ಥಳೀಯ ರಾಜಕಾರಣಿಯಾಗಿದ್ದು, ಕೇಸು ದಾಖಲಿಸಲು ಮೀನಾಮೇಷ ಎಣಿಸಿದರು. ಕೇಸು ಬದಲು ರಾಜಿ ಸಂಧಾನ ಮಾಡಲು ಬಯಸಿದರು ಎಂದು ಹುಡುಗಿಯ ತಂದೆ ಹೇಳಿದ್ದಾರೆ.

ಆರೋಪಿ ರೋಹಿತ್​ ದೈಹಿಕ ಹಾಗೂ ಮಾನಸಿಕವಾಗಿ ನನ್ನ ಮಗಳಿಗೆ ಕಿರುಕುಳ ನೀಡಿದ್ದಾನೆ. ಆದರೀಗ ಆರೋಪಿ ಕೆಲವೇ ಕ್ಷಣಗಳಲ್ಲಿ ಜೈಲಿನಿಂದ ಬಿಡುಗಡೆಯಾಗಲಿದ್ದಾನೆ. ಇದೆಂಥಾ ನ್ಯಾಯ ಎಂದು ಹುಡುಗಿ ತಾಯಿ ಅಳಲು ತೊಡಿಕೊಂಡಿದ್ದಾಳೆ.

ಮಾನವ ಹಕ್ಕುಗಳ ಆಯೋಗದಲ್ಲಿ ಸಂತ್ರಸ್ತೆ ದೂರು ದಾಖಲಿಸಿದ ಬಳಿಕವಷ್ಟೇ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಪೊಲೀಸರು ಪರಾರಿಯಾಗಿರುವ ರೋಹಿತ್​ ಪತ್ತೆಗೆ ವಿಶೇಷ ತಂಡ ನಿಯೋಜಿಸಲಾಗಿದೆ. ಆಗಸ್ಟ್​ 12ರಂದೇ ಪ್ರಕರಣ ದಾಖಲಿಸಿದ್ದೇವೆ. ಆರೋಪಿ ತಂದೆಗೆ ಬುಲಾವ್​ ನೀಡಿ ವಿಚಾರಣೆಯನ್ನು ನಡೆಸಿದ್ದೇವೆ. ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಇತ್ತ ಆರೋಪಿ ರಾಜಕೀಯ ಪ್ರಭಾವದವನಾಗಿರುವುದರಿಂದ ಭಯದಲ್ಲೇ ಬದುಕುತ್ತಿದ್ದೇವೆ ಎಂದು ಸಂತ್ರಸ್ತೆಯ ಪಾಲಕರು ಅಳಲು ತೊಡಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net