

ನವದೆಹಲಿ : ಹಳೆ ದಾಖಲೆಗಳನ್ನು ಮುರಿದು ಹೊಸ ಹೊಸ ದಾಖಲೆ ಬರೆಯಲು ಪ್ರಯತ್ನಿಸುತ್ತಾರೆ. ಟರ್ಕಿ ದೇಶದ ವ್ಯಕ್ತಿಯೊಬ್ಬರು ಕೇಲವ ಒಂದು ಹೊಡೆತದಲ್ಲಿ ಬರೋಬ್ಬರಿ 37 ಇಟ್ಟಿಗೆಗಳನ್ನು ಒಡೆಯುವ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಬರೆದಿದ್ದಾರೆ.
ವಿಡಿಯೋದಲ್ಲಿ ಏನಿದೆ?: ಎತ್ತರದ ಮೇಜಿನ ಮೇಲೆ ನಿಂತ ವ್ಯಕ್ತಿ ಕಬ್ಬಿಣದ ಸ್ಟ್ಯಾಂಡ್ ಮೇಲೆ ನಿಲ್ಲಿಸಿದ್ದ ಬರೋಬ್ಬರಿ 37 ಇಟ್ಟಿಗೆಗಳನ್ನು ಇಟ್ಟಿಗೆಗಳನ್ನು ಒಂದೇ ಹೊಡೆತದಲ್ಲಿ ಒಡೆದಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ. ಇಲ್ಲಿಯವರೆಗೆ ಯಾರೂ ಒಂದೇ ಗುದ್ದಿನಲ್ಲಿ ಇಷ್ಟು ಇಟ್ಟಿಗೆಗಳನ್ನು ಒಡೆಯಲು ಸಾಧ್ಯವಾಗಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಟರ್ಕಿಯ ಮುಗ್ಲಾ ಸಿಟ್ಕಿ ಕೊಕ್ಮನ್ ವಿಶ್ವವಿದ್ಯಾಲಯದ ಅಟಾಟರ್ಕ್ ಸಾಂಸ್ಕೃತಿಕ ಕೇಂದ್ರದಲ್ಲಿ ವ್ಯಕ್ತಿ ಈ ಸಾಧನೆ ಮಾಡಿದ್ದಾನೆ. ಈ ಕುರಿತಂತೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ತನ್ನ ಇಸ್ಟಾಗ್ರಾಮ್ ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ವ್ಯಕ್ತಿಯು ಶಕ್ತಿ ಪ್ರದರ್ಶಿಸುತ್ತಿರುವುದನ್ನು ಕಾಣಬಹುದು. ಈ ಹಿಂದೆ 2015 ರಲ್ಲಿ ಓರ್ವ ವ್ಯಕ್ತಿ ಈ ಸಾಧನೆ ಮಾಡಿದ್ದು ಎಂದು ತಿಳಿದು ಬಂದಿದೆ.