More

    1 ಕೆ.ಜಿ ಮರದ ಬೆಲೆ 8 ಲಕ್ಷ ರೂ.; ಅತ್ಯಂತ ದುಬಾರಿ ಮರ ಯಾವುದು ಗೊತ್ತಾ?

    ನವದೆಹಲಿ: ಅತ್ಯಂತ ದುಬಾರಿ ಮರ ಯಾವುದು ಎಂದರೆ ಅನೇಕರು ಶ್ರೀಗಂಧ ಅಂತಾರೆ. ವಿಶ್ವದಾದ್ಯಂತ ವಿವಿಧ ಬಗೆಯ ದುಬಾರಿ ಮರಗಳಿವೆ. ಈ ಮರಕ್ಕೆ 1 ಕೆಜಿಗೆ ಲಕ್ಷಗಟ್ಟಲೆ ಬೆಲೆಯನ್ನು ಹೊಂದಿದೆ. ಯಾವ ಮರ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ…

    ಶ್ರೀಗಂಧಕ್ಕೆ ಸರಾಸರಿ 7 ರಿಂದ 8 ಸಾವಿರದವರೆಗೆ ಲಭ್ಯವಿದೆ. ಆದ್ರೆ, ಈ ದುಬಾರಿ ಬೆಲೆ ಬಾಳುವ ಈ ಮರದ ಹೆಸರು ‘ಆಫ್ರಿಕನ್ ಬ್ಲ್ಯಾಕ್‌ವುಡ್’. ಈ ಮರದ ಬೆಲೆ 8 ಸಾವಿರ ಪೌಂಡ್ ಅಂದರೆ, ರೂ. 7-8 ಲಕ್ಷ ರೂಪಾಯಿ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಈ ಮರವನ್ನ ಕಿಲೋ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತದೆ.

    ಇದನ್ನೂ ಓದಿ: ಆಸ್ತಿಗಾಗಿ ತಂದಗೆ ಸುತ್ತಿಗೆಯಿಂದ ಹೊಡೆದ; ದೇಹವನ್ನು ಕತ್ತರಿಸಿ ಸೂಟ್‌ಕೇಸ್‌ಗೆ ತುಂಬಿ ಎಸೆದ ಮಗ

    ಆಫ್ರಿಕನ್ ಬ್ಲ್ಯಾಕ್‌ವುಡ್ ಮರವು ಸರಾಸರಿ 25-40 ಅಡಿ ಎತ್ತರವಿರುತ್ತೆ. ಈ ಮರವು ಪ್ರಪಂಚದ 26 ದೇಶಗಳಲ್ಲಿ ಮಾತ್ರ ಕಂಡುಬರುತ್ತದೆ. ಈ ಮರವನ್ನ ಹೆಚ್ಚಾಗಿ ಆಫ್ರಿಕಾದ ಖಂಡದ ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿ ಕಾಣಬಹುದು. ಈ ಮರವನ್ನ ವಿಶ್ವದ ಅತ್ಯಂತ ಅಪರೂಪದ ಮರವೆಂದು ಪರಿಗಣಿಸಲಾಗಿದೆ. ಅದರ ಒಂದು ಮರವು ಬೆಳೆಯಲು 60 ವರ್ಷಗಳವರೆಗೆ ತೆಗೆದುಕೊಳ್ಳುತ್ತದೆ.

    ಅನೇಕ ಐಷಾರಾಮಿ ಪೀಠೋಪಕರಣಗಳು, ಶೆಹನಾಯ್, ಕೊಳಲು ಮುಂತಾದ ಕೆಲವು ವಿಶೇಷ ಸಂಗೀತ ಉಪಕರಣಗಳು, ಅನೇಕ ಸಂಗೀತ ವಾದ್ಯಗಳು ಆಫ್ರಿಕನ್ ಬ್ಲ್ಯಾಕ್‌ವುಡ್​​ನಿಂದ ಮಾಡಲ್ಪಟ್ಟಿದೆ. ಈ ಮರವನ್ನ ವಿಶೇಷ ಉತ್ಪನ್ನಗಳನ್ನ ತಯಾರಿಸಲು ಬಳಸಲಾಗುತ್ತದೆ. ಆದ್ದರಿಂದ ಇದು ತುಂಬಾ ದುಬಾರಿಯಾಗಿದೆ. ಅರಣ್ಯನಾಶದಿಂದಾಗಿ ಆಫ್ರಿಕನ್ ಬ್ಲ್ಯಾಕ್‌ವುಡ್ ಮರಗಳ ಸಂಖ್ಯೆ ಬಹಳ ಕಡಿಮೆಯಾಗಿದೆ.

    ಏಪ್ರಿಲ್ 1ರಿಂದ ಓಪನ್ ಏರ್ ಬಾರ್​ಗಳು ಬಂದ್‌; ನಿಯಮಗಳು ಅನ್ವಯ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts