'ಗಂಡಿನ ಬದಲು ಹೆಣ್ಣಾಗಿದೆ, ತಿಂಗ್ಳಿಗೆ 30 ಸಾವಿರ ಕೊಡಿ'; ವಿಚಿತ್ರ ಬೇಡಿಕೆ ಇಟ್ಟ ಅಳಿಯನಿಗೆ ಅತ್ತೆ ಮಾವನಿಂದ ಪಾಠ

baby
Published on

ಮುಂಬೈ: ದೇಶ ಎಷ್ಟೇ ಅಭಿವೃದ್ಧಿ ಹೊಂದಿದ್ದರೂ ಹೆಣ್ಣು ಗಂಡೆಂಬ ಭೇದ ಭಾವ ಕಡಿಮೆಯಾಗಿಲ್ಲ. ಈಗಳು ಹೆಣ್ಣು ಭ್ರೂಣ ಹತ್ಯೆಯ ಪ್ರಕರಣಗಳ ಸಂಖ್ಯೆಯೇನು ಕಡಿಮೆಯಾಗಿಲ್ಲ. ಏಳು ಜನ್ಮ ಜತೆಯಿರುವ ಪ್ರಮಾಣ ಮಾಡಿ ಕೈ ಹಿಡಿದ ಧರ್ಮ ಪತ್ನಿ ಗಂಡು ಮಗುವಿಗೆ ಜನ್ಮ ನೀಡುವ ಬದಲು ಹೆಣ್ಣು ಮಗುವಿಗೆ ಜನ್ಮ ನೀಡಿದಳು ಎಂದು ಪತಿಯೊಬ್ಬ ಅತ್ತೆ ಮನೆಯಲ್ಲಿ ವಿಚಿತ್ರ ಬೇಡಿಕೆ ಇಟ್ಟಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

ಇತ್ತೀಚೆಗೆ 21 ವರ್ಷದ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಇದನ್ನು ಸಹಿಸದ ಪತಿ ಅತ್ತೆಯ ಮನೆಗೆ ಹೋಗಿ ಪ್ರತಿ ತಿಂಗಳು 30 ಸಾವಿರ ರೂಪಾಯಿ ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ನಿಮ್ಮ ಮಗಳು ಮತ್ತು ನಿಮ್ಮ ಮೊಮ್ಮಗಳನ್ನು ನೋಡಿಕೊಳ್ಳಲು ನನಗೆ ಅಷ್ಟು ಹಣ ಬೇಕು ಎಂದು ತಿಳಿಸಿದ್ದಾನೆ. ಆದರೆ ಇದರಿಂದ ನೊಂದ ಅತ್ತೆ ಮಾವ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಳಿಯ ಮತ್ತು ಅಳಿಯನ ತಂದೆ ತಾಯಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಭಾರತೀಯ ದಂಡ ಸಂಹಿತೆ ಸೆಕ್ಷನ್​ 498ಎ ಅಡಿಯನ್ನು ಪ್ರಕರಣ ದಾಖಲಾಗಿದೆ. (ಪಿಟಿಐ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net