

ಶಿವಮೊಗ್ಗ: ನ್ಯಾಯಾಲಯದ ಕಲಾಪ ನಡೆಯುತ್ತಿದ್ದ ವೇಳೆಯೇ ವಕೀಲರಿಗೆ ಅವಹೇಳನ ಮಾಡಿದ ಸಾಕ್ಷಿದಾರನಿಗೆ ಶಿವಮೊಗ್ಗದ 3ನೇ ಜೆಎಂಎಫ್‌ಸಿ ನ್ಯಾಯಾಲಯವು ಒಂದು ದಿನದ ಜೈಲು ಶಿಕ್ಷೆ ವಿಧಿಸಿದೆ.
ಭದ್ರಾವತಿಯ ಸಿದ್ಲಿಪುರ ಗ್ರಾಮದ ನಿವಾಸಿ ಇಟ್ಟಿಗೆ ವ್ಯಾಪಾರಿ ಶಂಕರ್ ಶಿಕ್ಷೆಗೆ ಒಳಗಾದವ. ಈತ ಹೊಡೆದಾಟ ಪ್ರಕರಣವೊಂದರ ಸಾಕ್ಷಿದಾರನಾಗಿ ಕೋರ್ಟ್‌ಗೆ ಬಂದಿದ್ದ.
ಈ ವೇಳೆ ವಕೀಲ ನಯಾಜ್ ಅಹಮ್ಮದ್ ಎಂಬುವರಿಗೆ ನೀವು ಪಾಕಿಸ್ತಾನದವರೆಂದು ನ್ಯಾಯಾಧೀಶರ ಎದುರೇ ಅವಹೇಳನಕಾರಿ ಪದ ಪ್ರಯೋಗ ಮಾಡಿದ್ದ. ಇದರಿಂದ ಸಿಟ್ಟಾದ ನ್ಯಾಯಾಧೀಶೆ ಜ್ಯೋತಿ ಪಾಟೀಲ್, ನ್ಯಾಯಾಲಯ ಕಾರ್ಯಕಲಾಪಕ್ಕೆ ಅಡ್ಡಿ ಮತ್ತು ಅನುಚಿತ ವರ್ತನೆ ತೋರಿದ್ದಕ್ಕೆ ಒಂದು ದಿನ ಜೈಲು ಶಿಕ್ಷೆ ವಿಧಿಸಿದ್ದಾರೆ.