ಪ್ರೇಮಿ ಗುಟ್ಟು ಪತಿಗೆ ಗೊತ್ತಾಯಿತೆಂದು ದುಪಟ್ಟಾದಿಂದ ಕುತ್ತಿಗೆ ಬಿಗಿದು ಆತನ ಕಥೆ ಮುಗಿಸಿದ ಮಹಿಳೆ..YouTuber

YouTuber kills husband with help of lover after he finds them in intimate act
Published on

ಹರಿಯಾಣ: ( YouTuber)  ಪ್ರೇಮಿಯೊಂದಿಗಿರುವುದನ್ನು ಪತಿ ನೋಡಿದ್ದಕ್ಕೆ, ಆತನ ಕುತ್ತಿಗೆಗೆ ದುಪಟ್ಟಾ ಬಿಗಿದು ಕೊಲೆ ಮಾಡಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.

ರವೀನಾ ಯೂಟ್ಯೂಬರ್ ಆಗಿದ್ದು, ಈಕೆ ಪತಿ ಪ್ರವೀಣ್. ಅವರಿಬ್ಬರಿಗೆ 6 ವರ್ಷದ ಮಗನಿದ್ದಾನೆ. ರವೀನಾಗೆ ಒಂದೂವರೆ ವರ್ಷಗಳ ಹಿಂದೆ ಸುರೇಶ್ ಎಂಬಾತನನ್ನು ಇನ್​ಸ್ಟಾಗ್ರಾಮ್​ನಲ್ಲಿ ಪರಿಚಯವಾಗಿದ್ದನು.

ಮಾರ್ಚ್​ 25ರಂದು ಶಕೆ ಶೂಟಿಂಗ್​ಗೆ ಹೊರ ಹೋಗಿದ್ದಳು, ಬಳಿಕ ಪ್ರವೀಣ್ ಮನೆಗೆ ಬರುವಾಗ ಆಕೆ ಸುರೇಶ್​ ಜತೆ ಮನೆಯಲ್ಲಿದ್ದಳು. ಅದನ್ನು ನೋಡಿ ಜಗಳ ಶುರುವಾಗಿತ್ತು. ಆಕೆ ಸುರೇಶ್​ ಎಂಬುವವನ ಜತೆ ಇದ್ದುದನ್ನು ಕಂಡು ತಾಳ್ಮೆ ಕಳೆದುಕೊಂಡಿದ್ದಾನೆ. ಬಳಿಕ ವಾಗ್ವಾದ ನಡೆದಿತ್ತು. ನಂತರ ಮಹಿಳೆ ದುಪಟ್ಟಾದಿಂದ ಪ್ರವೀಣ್​ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಸಂಜೆಯಾಗುವವರೆಗೆ ಹೆಣವನ್ನು ಅಲ್ಲೇ ಇಟ್ಟುಕೊಂಡು ಬಳಿಕ, 6 ಕಿ.ಮೀ ಬೈಕ್​ನಲ್ಲಿ ಹೋಗಿ ಚರಂಡಿಗೆ ದೇಹ ಎಸೆದಿದ್ದರು.

ಮೂರು ದಿನಗಳ ಬಳಿಕ ಪ್ರವೀಣ್ ಅವರ ಕೊಳೆತ ಶವ ಚರಂಡಿಯಲ್ಲಿ ಸಿಕ್ಕಿತ್ತು. ಆ ಪ್ರದೇಶದಲ್ಲಿರುವ ಸಿಸಿಟಿವಿ ಕ್ಯಾಮರಾಗಳಲ್ಲಿ ಈ ಕೃತ್ಯ ಸೆರೆಯಾಗಿದೆ.

ಅವರಿಬ್ಬರಿಗೆ 6 ವರ್ಷದ ಮಗನಿದ್ದಾನೆ. ಆಕೆ ವಿಡಿಯೋ ಚಿತ್ರೀಕರಿಸಲು ಆಗಾಗ ಬೇರೆ ಕಡೆಗೆ ಹೋಗುತ್ತಿದ್ದಳು. ಪ್ರವೀಣ್ ಮತ್ತು ಕುಟುಂಬದ ಇತರರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು ಮತ್ತು ಆಗಾಗ ವಾದಗಳು ನಡೆಯುತ್ತಿದ್ದವ ಎನ್ನಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net