ಹೆಲ್ಮೆಟ್​ ಕಳ್ಳತನವಾಗಿದೆ ಹುಡುಕಿಕೊಡಿ ಎಂದು ಪೊಲೀಸ್​ ಠಾಣೆ ಮೆಟ್ಟಿಲೇರಿದ ವ್ಯಕ್ತಿ!

Untitled design - 2023-08-17T110107.113
Published on

ಬೆಂಗಳೂರು: ರಾಜ್ಯ ರಾಜಧಾನಿಯಲ್ಲೊಂದು ವಿಚಿತ್ರ ಪ್ರಕರಣ ದಾಖಲಾಗಿದ್ದು, ಟೀ ಕುಡಿದು ಬರುವಷ್ಟರಲ್ಲಿ ತನ್ನ ಹೆಲ್ಮೆಟ್​ ಕಳ್ಳತನವಾಗಿದ್ದನ್ನು ಅರಿತ ವ್ಯಕ್ತಿಯೊಬ್ಬ, ಹೆಲ್ಮೆಟ್​ ಹುಡುಕಿಕೊಡಿ ಎಂದು ಪೊಲೀಸ್​ ಠಾಣೆಯಲ್ಲಿ ದೂರು ರಿಜಿಸ್ಟರ್​ ಮಾಡಿದ ಘಟನೆ ಗಿರಿನಗರದಲ್ಲಿ ವರದಿಯಾಗಿದೆ.

ಗಿರಿನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣದ ಕುರಿತು ಎಫ್ಐಆರ್ ದಾಖಲಿಸಿದ ವ್ಯಕ್ತಿಯನ್ನು ಸೂರ್ಯ ಎಂದು ತಿಳಿಸಲಾಗಿದ್ದು, ಜ್ಯೂಸ್ ಕುಡಿಯಲು ದ್ವಾರಕನಗರದ ಜಯದುರ್ಗ ಬೇಕರಿಯೊಂದಕ್ಕೆ ತೆರಳಿದ್ದಾರೆ. ಈ ವೇಳೆ ತಮ್ಮ 10 ಸಾವಿರ ರೂ. ಮೌಲ್ಯದ ಹೆಲ್ಮೆಟ್​ ಅನ್ನು ಟೇಬಲ್ ಮೇಲೆ ಇಟ್ಟಿದ್ದರು. ಜ್ಯೂಸ್​ ಸೇವಿಸಿದ ಬಳಿಕ ಹೆಲ್ಮೆಟ್​​ ಅನ್ನು ಸ್ಥಳದಲ್ಲೇ ಮರೆತು ಹೋಗಿದ್ದಾರೆ.

ಹೆಲ್ಮೆಟ್​ ಮರೆತ ಬಗ್ಗೆ ತಿಳಿದು, ಬೇಕರಿಯತ್ತ ಹಿಂದಿರುಗುವ ಮುನ್ನವೇ ದುಷ್ಕರ್ಮಿಗಳು ಹೆಲ್ಮೆಟ್ ಕದ್ದು ಪರಾರಿಯಾಗಿದ್ದಾರೆ. ಘಟನೆ ತಿಳಿದು ಬೇಸರಗೊಂಡ ಸೂರ್ಯ, ತನ್ನ ಹೆಲ್ಮೆಟ್ ಹುಡುಕಿಕೊಡಿ ಎಂದು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ದೂರಿನನ್ವಯ ಎಫ್ಐಆರ್ ದಾಖಲಿಸಿಕೊಂಡು ಹೆಲ್ಮೆಟ್ ಹುಡುಕಾಟಕ್ಕೆ ಮುಂದಾದ ಪೊಲೀಸರು, ಬೇಕರಿಯಲ್ಲಿನ ಸಿಸಿಟಿವಿ ಆಧರಿಸಿ ಹೆಲ್ಮೆಟ್ ಪತ್ತೆಗೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net