

ತಮಿಳುನಾಡು ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಬ್ಯಾಟ್ಸ್ಮನ್ ಹೊಡೆದ ಸಿಕ್ಸರ್ ಸ್ಟೇಡಿಯಂನಿಂದ ಹೊರಗೆ ಬಿದ್ದಿದ್ದು, ಅದನ್ನು ವಾಪಾಸ್ ಕೊಡುವಂತೆ ಹೇಳಿದರೆ, ವ್ಯಕ್ತಿಯೊಬ್ಬ ಬಾಲ್ ಕೊಡದೆ ಓಡಿಹೋದ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸದ್ಯ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಟಿಎನ್ಪಿಲ್ ಪಂದ್ಯದಲ್ಲಿ ಚೆಪಾಕ್ ಸೂಪರ್ ಗಿಲ್ಲಿಸ್ ತಂಡದ ಬ್ಯಾಟ್ಸ್ಮನ್ ಎದುರಾಳಿ ಟೀಮ್ನ ವೇಗಿ ಎಸೆದ ಬಾಲ್ಗೆ ಭರ್ಜರಿ ಸಿಕ್ಸ್ ಬಾರಿಸಿದರು. ಬ್ಯಾಟರ್ ಹೊಡೆದ ಸಿಕ್ಸರ್ ನೇರವಾಗಿ ಸ್ಟೇಡಿಯಂನಿಂದ ಹೊರಗೆ ಬಿದ್ದಿದೆ. ತಕ್ಷಣವೇ ಬಾಲ್ ತರಲು ಹೋದವರಿಗೆ ಹಿಂತಿರುಗಿಸಲು ನಿರಾಕರಿಸಿದ ಸ್ಥಳೀಯ ವ್ಯಕ್ತಿ, ಅಲ್ಲಿಂದ ಓಡಿಹೋಗಿದ್ದಾನೆ. ಇದು ಅನೇಕರಿಗೆ ನಗು ತರಿಸಿದರು ಕೆಲವರಿಗೆ ಮಾತ್ರ ತೀವ್ರ ಬೇಸರ ಮೂಡಿಸಿದೆ.
ಕ್ಯಾಮರಾಗಳು ತನ್ನನ್ನು ಸೆರೆಹಿಡಿಯುತ್ತಿದೆ ಎಂದು ಗೊತ್ತಿದ್ದರೂ ಕೂಡ ಬಾಲ್ ಕೊಡಲು ನಿರಾಕರಿಸಿದ ಅನಾಮಧೇಯ ವ್ಯಕ್ತಿ, ಎಷ್ಟು ಹೇಳಿದರೂ ಕೂಡ ಬಾಲ್ ಹಸ್ತಾಂತರಿಸದೆ, ಏಕಾಏಕಿ ಓಡಿಹೋಗಿದ್ದಾನೆ. ಸದ್ಯ ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಟಿಎನ್ಪಿಎಲ್ ಫೈನಲ್ ಇದೇ ಆಗಸ್ಟ್ 02ರಂದು ನಡೆಯಲಿದೆ,(ಏಜೆನ್ಸೀಸ್).