

ರಾಜಸ್ಥಾನ: ಬಕ್ರೀದ್ (Bakrid) ಹಬ್ಬದ ಹಿನ್ನೆಲೆ ಹಲವೆಡೆ ಕುರಿಗಳ ಖರೀದಿ ಭಾರಿ ಜೋರಾಗಿ ನಡೆಯುತ್ತಿದ್ದು, ಈ ವೇಳೆ ರಾಜಸ್ಥಾನದಲ್ಲಿ ಕುರುಬನ ಬಳಿಯಿದ್ದ ಕುರಿಗೆ 1 ಕೋಟಿ ರೂ. ಕೊಡುತ್ತೇವೆ ಎಂದು ಜನರು ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ವ್ಯಕ್ತಿ ನಿರಾಕರಿಸಿರುವುದು ಇದೀಗ ಹಲವರಿಗೆ ಶಾಕ್ ನೀಡಿದೆ.
ಘಟನೆಯ ವಿವರ: ರಾಜಸ್ಥಾನದ (Rajasthan) ಚುರು ಜಿಲ್ಲೆಯ ಕುರುಬನೊಬ್ಬ ಸಾಕಿದ್ದ ಕುರಿಮರಿಗಾಗಿ ಜನರು 70 ಲಕ್ಷ ರೂ. ರಿಂದ 1 ಕೋಟಿ ರೂ. ಹಣವನ್ನು ನೀಡಲು ಆತನ ಮನೆ ಮುಂದೆ ದೌಡಾಯಿಸಿದ್ದಾರೆ. ಆದ್ರೆ, ವ್ಯಕ್ತಿ ಮಾತ್ರ ತನ್ನ ಕುರಿಯನ್ನು ಕೊಡುವುದಿಲ್ಲ, ಎಷ್ಟೇ ಕೋಟಿ ಹಣ ಕೊಟ್ಟರು ನೀಡುವುದಿಲ್ಲ ಎಂದು ಹೇಳುವ ಮೂಲಕ ನಿರಾಕರಿಸಿದ್ದಾರೆ. ಇದಕ್ಕೆ ಬಲವಾದ ಕಾರಣವೂ ಇದೆ!
ಕುರಿಯ ಹೊಟ್ಟೆಯ ಭಾಗದಲ್ಲಿ ವಿಶೇಷವಾಗಿ '786' ಅಂಕಿ ಇರುವ ಕಾರಣಕ್ಕೆ ಕುರುಬ ಇದನ್ನು ಕೊಡಲು ನಿರಾಕರಿಸಿದ್ದಾನೆ. ಈ ಕುರಿ ಇದೀಗ ಒಂದು ಹಳ್ಳಿಗೆ ಮಾತ್ರವಲ್ಲದೆ ಸುತ್ತಮುತ್ತಲಿನ ಹಳ್ಳಿಗಳಲ್ಲೂ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕುರಿ ದೇಹದ ಮೇಲಿರುವ ಅಂಕಿಗಳ ಅರ್ಥವೇನೆಂದು ತನಗೆ ತಿಳಿದಿಲ್ಲ ಎಂದು ಕುರುಬ ರಾಜು ಸಿಂಗ್ ಹೇಳಿದ್ದಾರೆ.
ಈ ಪ್ರಾಣಿಯು ನನಗೆ ತುಂಬಾ ಪ್ರೀತಿ ನೀಡಿದೆ. ಜನರು ಕುರಿಗಾಗಿ 70 ಲಕ್ಷದಿಂದ-1 ಕೋಟಿ ರೂ. ಹಣವನ್ನು ಮೀರಿ ಕೊಡಲು ಮುಂದಾಗುತ್ತಿದ್ದಾರೆ. ಆದರೆ ಇದನ್ನು ಮಾರಾಟ ಮಾಡಲು ನನ್ನಿಂದ ಸಾಧ್ಯವಿಲ್ಲ! ಕುರಿಗೆ ದಾಳಿಂಬೆ, ಪಪ್ಪಾಯಿ, ಬಿಂದೋಲ, ರಾಗಿ ಮತ್ತು ಹಸಿರು ತರಕಾರಿಗಳನ್ನು ನೀಡಲಾಗುತ್ತದೆ. ಸದ್ಯ ಭದ್ರತಾ ಕಾರಣಗಳಿಂದಾಗಿ ಕುರಿಯನ್ನು ತನ್ನ ಮನೆಯೊಳಗೆ ಇಟ್ಟುಕೊಳ್ಳಲು ಪ್ರಾರಂಭಿಸಿದ್ದೇನೆ ಎಂದು ರಾಜು ಸಿಂಗ್ ಹೇಳಿದ್ದಾರೆ,(ಏಜೆನ್ಸೀಸ್).