ಬೈಕ್‌ನ ಪೆಟ್ರೋಲ್ ಟ್ಯಾಂಕ್‌ಗೆ ಪಟಾಕಿ ಇಟ್ಟು ಸಿಡಿಸಿದ! ನಂತ್ರ ಏನಾಯಿತು ನೋಡಿ...Firecracker

man firecracker
Published on

ನವದೆಹಲಿ: (Firecracker ) ಸಾಮಾಜಿಕ ಮಾಧ್ಯಮದಲ್ಲಿ ಪ್ರತಿದಿನ ವಿಭಿನ್ನ ವೀಡಿಯೊಗಳು ವೈರಲ್ ಆಗುತ್ತಿರುವುದು ನಿಮಗೆ ತಿಳಿದಿರಲೇಬೇಕು. ಕೆಲವೊಮ್ಮೆ ಹೊಡೆದಾಟದ ವಿಡಿಯೋ ವೈರಲ್ ಆಗಿದ್ದರೆ ಇನ್ನು ಕೆಲವೊಮ್ಮೆ ಡ್ಯಾನ್ಸ್ ನಂತಹ ವಿಡಿಯೋಗಳು ವೈರಲ್ ಆಗುತ್ತವೆ. ಆದರೆ ಇದೀಗ ನಾವು ಇಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತೀರುವ ವೀಡಿಯೊ  ಸ್ವಲ್ಪ ವಿಭಿನ್ನವಾಗಿದೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಬೈಕ್‌ನ ಪೆಟ್ರೋಲ್ ಟ್ಯಾಂಕ್‌ಗೆ ಪಟಾಕಿ ಹಾಕುತ್ತಿರುವುದು ಕಂಡು ಬರುತ್ತಿದೆ. ಪೆಟ್ರೋಲ್ ಟ್ಯಾಂಕ್ ನೋಡಿದರೆ ಬೈಕ್ ಸಾಕಷ್ಟು ಹಳೆಯದಾಗಿರಬೇಕು ಅನ್ನಿಸುತ್ತದೆ. ಪಟಾಕಿಯನ್ನು ತೊಟ್ಟಿಗೆ ಹಾಕಿದ ನಂತರ ವ್ಯಕ್ತಿ ಬೆಂಕಿ ಹಚ್ಚಿ ದೂರದಲ್ಲಿ ನಿಂತಿದ್ದಾನೆ.

ಸ್ವಲ್ಪ ಹೊತ್ತಿನ ನಂತರ ಪಟಾಕಿ ಸಿಡಿದ ಪರಿಣಾಮ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಹಾಗೂ ಸೀಟು ಗಾಳಿಗೆ ತೂರಿಕೊಂಡು ದೂರ ಬಿದ್ದಿದೆ. ವಿಡಿಯೋ ಯಾವಾಗ ಎಂಬುದಕ್ಕೆ ಮಾಹಿತಿ ನೀಡಿಲ್ಲ ಆದರೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವೀಡಿಯೊವನ್ನು @y_iamcrazyy ಹೆಸರಿನ ಖಾತೆಯಿಂದ X ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ವೀಡಿಯೋ ಪೋಸ್ಟ್ ಮಾಡುವಾಗ, 'ಬೈಕ್‌ನ ಪೆಟ್ರೋಲ್ ಟ್ಯಾಂಕ್‌ಗೆ  ಬಾಂಬ್ ಇಟ್ಟು  ಬೆಂಕಿ ಹೊತ್ತಿಸಿದ್ದಾನೆ. ಮುಂದೇನಾಯಿತು ನೋಡಿ' ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ

ಸುದ್ದಿ ಬರೆಯುವವರೆಗೂ ವಿಡಿಯೋವನ್ನು 3 ಲಕ್ಷ 83 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ವೀಡಿಯೊವನ್ನು ನೋಡಿದ ನಂತರ, ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಯಾಕೆ.. ಇವನಿಗೆ ಹುಚ್ಚು ಹಿಡಿದಿದ್ಯಾ? ಮೋಟಾರ್ಸೈಕಲ್ನ ಟ್ಯಾಂಕ್ ಅನ್ನು ತೆಗೆದುಹಾಕಲು ಉತ್ತಮ ಮಾರ್ಗವನ್ನು ಕಂಡುಕೊಂಡಿದ್ದಾರೆ. ಸಮಾಜಕ್ಕೆ ಯಾವ ಸಂದೇಶ ಕೊಡುತ್ತೀರ ನೀವೆಲ್ಲ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net