VIDEO: ತೋರುಬೆರಳಿನ ಮೂಲಕ ಪ್ರೇಯಸಿಗೆ ಟೆನ್ಷನ್​ ಕೊಟ್ಟ ಭೂಪ...!

Lovers
Published on

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುವ ಕೆಲವು ವಿಡಿಯೋಗಳು ನಿಮ್ಮನ್ನು ನಗಿಸುವುದರಲ್ಲಿ ಅನುಮಾನವೇ ಇಲ್ಲ.

ಹಾಗೇ ಈಗೊಂದು ಜೋಡಿಯ ವಿಡಿಯೋ ವೈರಲ್​ ಆಗಿದ್ದು, ಆ ಯುವಕ ತನ್ನ ಪ್ರೇಯಸಿಗೆ ಅದೆಂಥಾ ಟೆನ್ಷನ್​ ಕೊಟ್ಟ ನೋಡಿ...

ಮರದ ಕೆಲಸ ಮಾಡುತ್ತಿದ್ದ ಈತನಿಗೆ ತನ್ನ ಗರ್ಲ್​ಫ್ರೆಂಡ್​ನ್ನು ಪ್ರಾಂಕ್​ ಮಾಡುವ ಆಸೆಯಾಯಿತು. ಕೂಡಲೇ ಮರದ ಹಲಗೆಯ ಮೇಲೆ ಒಂದು ನೇಲ್​ ಕ್ಲಿಪ್​ (ಮೊಳೆ)ನ್ನು ಅಳವಡಿಸಿದ. ಅದರ ಮೇಲೆ ಒಂಚೂರು ಚೀಸ್​ ಹಾಕಿದ. (ರಕ್ತದಂತೆ ಕಾಣಲು). ಆ ಕ್ಲಿಪ್ ಒಳಗೆ ತನ್ನ ತೋರುಬೆರಳನ್ನು ಇಟ್ಟುಕೊಂಡು ಒಂದೇ ಸಮ ಕೂಗಲು ಶುರು ಮಾಡಿದೆ. ಬೇಬ್​...ಎಂದು ಪ್ರೇಯಸಿಯನ್ನು ಕರೆದ. ಅವಳು ಓಡೋಡಿ ಬಂದಳು. ಅವನಂತೂ ಆ ಕ್ಲಿಪ್​ ಕಟ್​ ಮಾಡಿಯೇ ನನ್ನ ಬೆರಳು ತೆಗೆಯಬೇಕು ಎಂದುಬಿಟ್ಟ. ಪಾಪಾ ಅವನ ಪ್ರೇಯಸಿ ಸಿಕ್ಕಾಪಟೆ ಟೆನ್ಷನ್ ಆಗಿ, ಅಲ್ಲಿಯೇ ಇದ್ದ ಪಕ್ಕಡ್​ ಹಿಡಿದು, ಆ ಮೊಳೆಯನ್ನು ಕತ್ತರಿಸಲು ಹೆದರುತ್ತಲೇ ಮುಂದಾದಳು. ಅವಳೆಷ್ಟು ಉದ್ವೇಗಕ್ಕೊಳಗಾಗಿದ್ದಳೆಂದರೆ, ಅವಳಿಗೆ ಆ ಮೊಳೆಯನ್ನು ಹೇಗೆ ಕಟ್ ಮಾಡಬೇಕು ಎಂದು ಗೊತ್ತಾಗುತ್ತಿರಲಿಲ್ಲ. ಆಗ ಆ ಯುವಕನೇ ಅವಳಿಗೆ ತಿಳಿಸುತ್ತಿದ್ದ. ಆ ಮೊಳೆಯಡಿ ಸಿಲುಕಿದ್ದ ಕೈ ಬೆರಳನ್ನೇ ತೆಗೆದು, ಅಲ್ಲಿ ಕತ್ತರಿಸು, ಇಲ್ಲಿ ಕತ್ತರಿಸು ಎಂದು ತೋರಿಸುತ್ತಿದ್ದ. ಮುರ್ನಾಲ್ಕು ಬಾರಿ, ಆ ಬೆರಳನ್ನು ಅವನು ಹೊರ ತೆಗೆದರೂ ಆ ಹುಡುಗಿಗೆ ತಿಳಿಯಲಿಲ್ಲ. ಕೊನೆಗೆ ಅವಳಿಗೆ ಅರ್ಥವಾಯಿತು. ಇದು ಆತ ತನ್ನನ್ನು ಪ್ರಾಂಕ್​ ಮಾಡುತ್ತಿದ್ದಾನೆಂದು ಗೊತ್ತಾದ ಮೇಲೆ ಆಕೆ, ಕಂಗಾಲಾಗಿ ಅವನೆಡೆಗೆ ನೋಡುವುದನ್ನು ವಿಡಿಯೋದಲ್ಲಿ ನೋಡಬಹುದು.

ಆ ವಿಡಿಯೋ ನೋಡಿದರೆ ನೀವೂ ಕೂಡ ಬಿದ್ದುಬಿದ್ದು ನಗುತ್ತೀರಿ. ಇದು ನಿನ್ನೆಯಷ್ಟೇ ಪೋಸ್ಟ್​ ಆಗಿದ್ದು, ಇದುವರೆಗೆ 3.9ಮಿಲಿಯನ್​ ವೀವ್ಸ್​ ಪಡೆದುಕೊಂಡಿದೆ. ನೆಟ್ಟಿಗರಂತೂ ತುಂಬ ಮೆಚ್ಚಿಕೊಂಡಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net