ಕೆಂಪು ಇರುವೆ ಪಾನಿ ಪುರಿ! ಏನ್​.. ಏನ್​ ತಿನ್ನಿಸ್ತಿರೋ ನಮಗೆ ಎಂದ ನೆಟ್ಟಿಗರು Ants Panipuri

Ants Panipuri
Published on

ಮುಂಬೈ: ( Ants Panipuri ) ಇತ್ತೀಚಿನ ದಿನಗಳಲ್ಲಿ ಬೀದಿ ವ್ಯಾಪಾರಿಗಳು ತಮ್ಮ ಗ್ರಾಹಕರನ್ನು ಆಕರ್ಷಿಸಲು ವಿವಿಧ ರೀತಿಯ ಭಕ್ಷ್ಯಗಳನ್ನು ಆವಿಷ್ಕರಿಸುತ್ತಾರೆ. ಪಾನಿಪುರಿಯನ್ನು ಸಮಾನ್ಯವಾಗಿ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಯಾರಾದರೂ ಅದನ್ನು ಕೆಂಪು ಇರುವೆಗಳಿಂದ ತಯಾರಿಸಿದರೆ, ನಿಮಗೆ ಹೇಗೆ ಅನಿಸುತ್ತದೆ? ಇದು ನಿಮಗೆ ಸ್ವಲ್ಪ ವಿಚಿತ್ರ ಎನಿಸಿದರೂ ಇದು ಸಂಪೂರ್ಣ ಸತ್ಯ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಗೋಲ್ಗಪ್ಪ ಅಥವಾ ಪಾನಿಪುರಿ ಎಂಬ ಹೆಸರು ಕೇಳಿದ ತಕ್ಷಣ ಜನರ ಬಾಯಲ್ಲಿ ನೀರೂರುತ್ತದೆ. ಅದಕ್ಕಾಗಿಯೇ ಹೆಚ್ಚಿನ ಪ್ರಯೋಗಗಳನ್ನು ಮಾಡಲಾಗುತ್ತದೆ. ಅಂತಹ ಒಂದು ವಿಡಿಯೋ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಚರ್ಚೆಯಲ್ಲಿದೆ.

ವರದಿಯ ಪ್ರಕಾರ, ಮುಂಬೈನ ಮಸ್ಕ್ ರೆಸ್ಟೋರೆಂಟ್‌ನ ಬಾಣಸಿಗ ವರುಣ್ ಟೋಟ್ಲಾನಿ ಗೋಲ್ಗಪ್ಪದ ಈ ಹೊಸ ರೆಸಿಪಿಯನ್ನು ಸಿದ್ಧಪಡಿಸಿದ್ದಾರೆ ಮತ್ತು ಅದನ್ನು ಇನ್‌ಸ್ಟಾದಲ್ಲಿ ಹಂಚಿಕೊಳ್ಳುವಾಗ, ಇದು ಥಾಯ್ ಕರಿ ಮತ್ತು ಪಾನಿ ಪುರಿಯ ಸಂಯೋಜನೆ. ಈ ವರ್ಷ 2024 ರಲ್ಲಿ, ಈ ಇರುವೆಗಳು ಜಿಐ ಟ್ಯಾಗ್ ಅನ್ನು ಪಡೆದಿವೆ. ಇದನ್ನು ತಿನ್ನುವುದು ಸತು, ಪ್ರೋಟೀನ್, ಕಬ್ಬಿಣ, ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ -12 ಅನ್ನು ಹೊಂದಿರುತ್ತದೆ ಎಂದು ವರದಿಯಾಗಿದೆ.

ಇದು ಆರೋಗ್ಯಕರ ಮೆದುಳಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಈ ವಿಡಿಯೋ ನೋಡಿದ ಜನರು ಭಾರೀ ಕಮೆಂಟ್ ಮಾಡುತ್ತಿದ್ದಾರೆ. 'ಪಾನಿ ಪುರಿಯನ್ನು ದಯವಿಟ್ಟು ವ್ಯರ್ಥ ಮಾಡಬೇಡಿ. ಇಂತಹ ಭಕ್ಷ್ಯಗಳನ್ನು ಮಾಡುವ ಕಲ್ಪನೆಯು ಹೇಗೆ ಬರುತ್ತದೆ?.. ಏನೆಲ್ಲ ನಮಗೆ ತಿನ್ನಿಸುತ್ತೀರಾ? ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net