ಸೇಬುಹಣ್ಣನ್ನು ಆರ್ಡರ್ ಮಾಡಿದವನಿಗೆ ಬಂದಿದ್ದು ದುಬಾರಿ ಬೆಲೆಯ ಆ್ಯಪಲ್ ಮೊಬೈಲ್!

apple news
Published on

ಲಂಡನ್: ಆನ್​ಲೈನ್​ ಶಾಪಿಂಗ್​ನಲ್ಲಿ ಕೆಲವು ಸಲ ಆರ್ಡರ್ ಮಾಡಿದ್ದ ವಸ್ತುಗಳಿಗಿಂತ ಇನ್ನೇನೋ ಬೇರೆ ವಸ್ತುಗಳು ಬಂದು ಶಾಕ್ ಆಗುವುದುಂಟು. ಇದಿರಂದ ಗ್ರಾಹಕರು ಪಡಪಾರದ ಪಡಿಪಾಟಲನ್ನು ಪಡುತ್ತಾರೆ.

ಆದರೆ ಇಲ್ಲೊಬ್ಬ ವ್ಯಕ್ತಿ ತಾನು ಆನ್​ಲೈನ್​ ಶಾಪಿಂಗ್​ನಲ್ಲಿ ಮಾಡಿದ್ದು ಸೇಬು ಹಣ್ಣಾದರೂ ಅವನಿಗೆ ತಲುಪಿದ್ದು ದುಬಾರಿ ಬೆಲೆಯ ಆ್ಯಪಲ್ ಮೊಬೈಲ್. ಇದರಿಂದ ಆತ ಕುಣಿದು ಕುಪ್ಪಳಿಸಿದ್ದಾನೆ.

ನಿಕ್ ಜೇಮ್ಸ್ ಎನ್ನುವ 50 ವರ್ಷದ ಲಂಡನ್​ನ ಟ್ವಿಕನ್ ಹ್ಯಾಮ್​ನ ವ್ಯಕ್ತಿ ಇತ್ತೀಚೆಗೆ Tesco ಎನ್ನುವ ಇ ಕಾಮರ್ಸ್​​ ತಾಣದಲ್ಲಿ ತರಕಾರಿ ಜೊತೆಗೆ ಸೇಬು ಹಣ್ಣುಗಳನ್ನು ಆರ್ಡರ್ ಮಾಡಿದ್ದಾನೆ. ನಿಗದಿಯಂತೆ ಆತನ ಮನೆಗೆ ತರಕಾರಿ ಹಾಗೂ ಹಣ್ಣು ಬಂದಿದೆ. ಆದರೆ ಸೇಬು ಇರಬೇಕಾದ ಜಾಗದಲ್ಲಿ ಆ್ಯಪಲ್ ಐಫೋನ್ ಎಸ್ ಬಂದಿದೆ. ಒಂದು ಕ್ಷಣ ದಂಗಾದ ನಿಕ್ ಜೇಮ್ಸ್​ ತಾನು ಆರ್ಡರ್ ಮಾಡಿದ್ದ ಚೀಟಿಯನ್ನು ನೋಡಿದ್ದಾನೆ. ಅಲ್ಲೂ ಕೂಡ ಸೇಬು ಹಣ್ಣು ಎಂದೇ ಇತ್ತು.

ಕಡೆಗೆ Tesco ಕಂಪನಿಯನ್ನು ವಿಚಾರಿಸಿದ್ದಾಗ ಗೊತ್ತಾಗಿದ್ದು Tesco ಕಂಪನಿ ತನ್ನು ಮಾರುಕಟ್ಟೆಯನ್ನು ವಿಸ್ತರಣೆ ಮಾಡಲು ಈ ರೀತಿ ಗ್ರಾಹಕರಿಗೆ ವಿಶೇಷ ಉಡುಗೊರೆಗಳನ್ನು ನೀಡಲು ಮುಂದಾಗಿದೆಯಂತೆ. ಅದರಲ್ಲೂ ದುಬಾರಿ ಐ ಫೋನ್​ ನೀಡಲು ಮುಂದಾಗಿದೆಯಂತೆ. ಒಟ್ಟಿನಲ್ಲಿ ಸೇಬು ಹಣ್ಣು ಆರ್ಡರ್ ಮಾಡಿದವನಿಗೆ ಆ್ಯಪಲ್ ಮೊಬೈಲ್ ಬಂದಿದ್ದು, ಏನ್ ಗುರು ಲಡ್ಡು ಬಂದು ಬಾಯಿಗೆ ಬಿತ್ತಾ ಎನ್ನುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net