More

    ನೀಟ್-ಪಿಜಿ ವೈದ್ಯಕೀಯ ಪ್ರವೇಶ ಪರೀಕ್ಷೆ ಮುಂದೂಡಿಕೆ

    ನವದೆಹಲಿ : ಉಲ್ಬಣಿಸುತ್ತಿರುವ ಕರೊನಾ ಸೋಂಕಿನ ಹಿನ್ನೆಲೆಯಲ್ಲಿ, ಬರುವ ಭಾನುವಾರದಂದು ನಡೆಯಬೇಕಿದ್ದ 2021ರ ನೀಟ್-ಪಿಜಿ(NEET-PG) ವೈದ್ಯಕೀಯ ಪ್ರವೇಶ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವರಾದ ಡಾ. ಹರ್ಷವರ್ಧನ್ ಟ್ವೀಟ್ ಮಾಡಿದ್ದು, ಮುಂದಿನ ದಿನಾಂಕವನ್ನು ನಂತರ ನಿರ್ಧರಿಸಲಾಗುವುದು ಎಂದಿದ್ದಾರೆ.

    ವೈದ್ಯಕೀಯ ಪಿಜಿ ಕೋರ್ಸ್​ಗಳಿಗೆ ಪ್ರವೇಶದ ನಿರೀಕ್ಷೆಯಲ್ಲಿರುವ 1.7 ಲಕ್ಷ ಅಭ್ಯರ್ಥಿಗಳು ತೆಗೆದುಕೊಂಡಿರುವ ಈ ಪರೀಕ್ಷೆಯು ಏಪ್ರಿಲ್ 18 ರ ಭಾನುವಾರ ನಿಗದಿಯಾಗಿತ್ತು. ಪರೀಕ್ಷೆಯನ್ನು ಮುಂದೂಡಿರುವ ಬಗ್ಗೆ ತಿಳಿಸಿರುವ ಸಚಿವರು, “ನಮ್ಮ ಯುವ ವೈದ್ಯಕೀಯ ವಿದ್ಯಾರ್ಥಿಗಳ ಒಳಿತನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ” ಎಂದಿದ್ದಾರೆ.

    ಇದನ್ನೂ ಓದಿ: ಮರ್ಕಜ್​ ಮಸೀದಿಯಲ್ಲಿ 50 ಜನಕ್ಕೆ ನಮಾಜ್ ಮಾಡಲು ಅವಕಾಶ : ಹೈಕೋರ್ಟ್

    ಈ ಮುನ್ನ ವಿದ್ಯಾರ್ಥಿ-ವೈದ್ಯರ ಗುಂಪೊಂದು ಪ್ರವೇಶ ಪರೀಕ್ಷೆಗಳ ಮುಂದೂಡಿಕೆಯನ್ನು ಕೋರಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿರುವ ವರದಿ ಹೊರಬಿದ್ದಿತ್ತು. ಸದರಿ ಅರ್ಜಿಯು ನಾಳೆ ಮುಖ್ಯ ನ್ಯಾಯಮೂರ್ತಿ ಎಸ್​.ಎ.ಬೊಬ್ಡೆ ಅವರ ಮುಂದೆ ವಿಚಾರಣೆಗೆ ಪಟ್ಟಿಯಾಗಿತ್ತು ಎನ್ನಲಾಗಿದೆ. (ಏಜೆನ್ಸೀಸ್)

    ಹಾಸನ ಶಾಸಕ ಪ್ರೀತಂ ಗೌಡಗೆ ಕರೊನಾ

    ಹಿಮಾಚಲ ಪ್ರದೇಶದಲ್ಲಿ ಟ್ರೆಕ್ ಮಾಡುತ್ತಿದ್ದವರಿಗೆ ಸಿಕ್ಕಿತು, ಪಾಕಿಸ್ತಾನಿ ಮೊಬೈಲ್ ಸಿಗ್ನಲ್ !

    ಕರೊನಾ ವಿರುದ್ಧ ದೃಢ ಸಂಕಲ್ಪ : ಚುನಾವಣೆ ಎದುರಿದ್ದರೂ ಈ ಹಳ್ಳಿ ಪೂರ್ಣ ಬಂದ್ !

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts