VIDEO : ಹುಡುಗಿ ಸಿಗಲಿಲ್ಲವೆಂದು ಎಮ್ಮೆಯನ್ನು ಮದುವೆಯಾದ ಯುವಕ

viralNews
Published on

ನವದೆಹಲಿ: ನವದೆಹಲಿ: ಯುವಕನೊಬ್ಬ ಮದುವೆಯಾಗಲು ಹುಡುಗಿ ಸಿಗುತ್ತಿಲ್ಲವೆಂದು ಎಮ್ಮೆಯನ್ನು ಮದುವೆಯಾಗಿದ್ದಾನೆ. ಈ ಹಾಸ್ಯಮಯ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಯುವಕನೊಬ್ಬ ಎಮ್ಮೆಯನ್ನು ಸಂಪ್ರದಾಯಬದ್ಧವಾಗಿ ಮದುವೆಯಾಗುತ್ತಿರುವ ಹಾಸ್ಯಮಯ ದೃಶ್ಯವನ್ನು ಕಾಣಬಹುದು. ವಿಡಿಯೋವನ್ನು ಮೋನಿ ಸಿಂಗ್‌ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್​​ ಆಗಿದೆ.

ಮೊದಲಿಗೆ ಎಮ್ಮೆಗೆ ಹೂವಿನ ಹಾರವನ್ನು ಹಾಕಿ ನಂತರ ತಾನು ಕೂಡಾ ಹಾರವನ್ನು ಕೊರಳಿಗೆ ಹಾಕಿಕೊಳ್ಳುತ್ತಾನೆ. ಬಳಿಕ ಎಮ್ಮೆಯ ಹಣೆಗೆ ಸಿಂಧೂರವನ್ನು ಹಚ್ಚಿ, ಎಮ್ಮೆಯ ಮೇಲೇರಿ ಸವಾರಿ ಹೋಗಲು ನಿರ್ಧರಿಸುತ್ತಾನೆ. ಆತ ಮೇಲೇರುತ್ತಿದ್ದಂತೆ ಎಮ್ಮೆ ಆತನನ್ನು ಕೆಳಗೆ ಬೀಳಿಸಿ ಓಡಿ ಹೋಗಿದೆ. ಕೆಳಗೆ ಬಿದ್ದ ಪರಿಣಾಮ ಆ ಯುವಕ ಕಾಲಿಗೆ ಗಾಯಗಳಾಗಿವೆ.

ಈ ವಿಡಿಯೋವನ್ನು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.  ಈ ಹಾಸ್ಯಮಯ ದೃಶ್ಯವನ್ನು ಕಂಡು ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net