VIDEO: ಈ ಯಂತ್ರಕ್ಕೆ ಮುಖ ತೋರಿಸಿದರೆ ಸಾಕು...ರಪ್​ ಅಂತ ಬಂದು ಕೂರತ್ತೆ ಮಾಸ್ಕ್​ !

Mask
Published on

ಈಗಂತೂ ಮುಖಕ್ಕೆ ಮಾಸ್ಕ್​ ಧರಿಸಿರುವುದು ತುಂಬ ಅಗತ್ಯಗಳಲ್ಲಿ ಒಂದಾಗಿದೆ. ಕರೊನಾದಿಂದ ತಪ್ಪಿಸಿಕೊಳ್ಳಲು ಮಾಸ್ಕ್​ ಕೂಡ ಒಂದು ಪ್ರಮುಖ ಸಾಧನ.

ಆದರೂ ಇನ್ನೂ ಅನೇಕರು ಮಾಸ್ಕ್​​ನ ಉಪಯೋಗವನ್ನು ಅರಿತುಕೊಂಡಿಲ್ಲ. ಮಾಸ್ಕ್​ ಧರಿಸದೆ ಹೊರಗೆಲ್ಲ ಅಡ್ಡಾಡುತ್ತಿದ್ದಾರೆ. ಅಂಥವರಿಗೆಲ್ಲ ಏನು ಮಾಡುವುದು? ಅವರಿಗೆ ಮಾಸ್ಕ್​ ಹಾಕುವವರು ಯಾರು? ಈಗ ತುಂಬ ಯೋಚಿಸಬೇಕಿಲ್ಲ. ಮಾಸ್ಕ್​ ಹಾಕದವರಿಗೆ ಹಾಕಿಸುವ ಒಂದು ಯಂತ್ರ ತಯಾರಾಗಿದೆ.

ಮಾಜಿ ಬಾಸ್ಕೆಟ್​ ಬಾಲ್​ ಆಟಗಾರ ರೆಕ್ಸ್​ ಚಾಂಪನ್​ ಅವರು ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿದ್ದು, ಅದರಲ್ಲಿ ಯಂತ್ರದ ಎದುರು ಮುಖ ತೆಗೆದುಕೊಂಡು ಹೋದರೆ, ಮಾಸ್ಕ್​ ಬಂದು ಸರಿಯಾದ ಜಾಗಕ್ಕೆ ಕುಳಿತುಕೊಳ್ಳುವುದುನ್ನು ನೋಡಬಹುದು. ಮಶಿನ್​ಗೆ ಮೊದಲೇ ಮಾಸ್ಕ್​ನ್ನು ಸರಿಯಾದ ಆಯಾಮದಲ್ಲಿ ಅಳವಡಿಸಿರಬೇಕು. ಆ ಮಾಸ್ಕ್​ನ್ನು ಅದು ಮನುಷ್ಯರ ಮುಖಕ್ಕೆ ಅಕ್ಷರಶಃ ಎಸೆಯುತ್ತದೆ. ಇದನ್ನೂ ಓದಿ: ಹಸಿವಾಗ್ತಿದೆ ಊಟ ಕೊಡಿ… ಉಸಿರಾಡಲು ಕಷ್ಟ ಆಗ್ತಿದೆ ಚಿಕಿತ್ಸೆ ನೀಡಿ ಎಂದು ಬೇಡುತ್ತಿತ್ತು ಆ ಹಿರಿಜೀವ

ಓರ್ವ ಯುವಕ ಮಶಿನ್​ ಎದುರು ಕುಳಿತುಕೊಳ್ಳುತ್ತಾನೆ. ಕೆಲವೇ ಸೆಕೆಂಡ್​ಗಳಲ್ಲಿ ಯಂತ್ರ ಅವನ ಮುಖಕ್ಕೆ ಮಾಸ್ಕ್​ ವೊಂದನ್ನು ಹಾರ್ಶ್​ ಆಗಿ ಎಸೆಯುವುದನ್ನು ವಿಡಿಯೋದಲ್ಲಿ ನೋಡಬಹುದು.

ಈ ವಿಡಿಯೋದಲ್ಲಿ ಇರುವ ಯುವಕ ಅಲೆನ್​ ಪಾಲ್. ಈತನೇ ಯಂತ್ರವನ್ನು ಕಂಡುಹಿಡಿದವನು ಎನ್ನಲಾಗಿದೆ. ಹಾಗೇ ಯಂತ್ರಕ್ಕೆ ಕರೆನೇಟರ್ ಎಂದು ಹೆಸರಿಟ್ಟಿದ್ದಾನೆ.

ವಿಡಿಯೋ ಸಿಕ್ಕಾಪಟೆ ಶೇರ್​ ಆಗುತ್ತಿದೆ. ಮಾಸ್ಕ್​ ಧರಿಸದವರ ಎದುರು ಈ ಮಶಿನ್​ ಹಿಡಿದರೆ ಸಾಕು..ಮುಖಕ್ಕೆ ರಪ್​ ಅಂತ ಮಾಸ್ಕ್​ ಬಂದು ಬೀಳುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net