ಬೀದಿ ನಾಯಿಯನ್ನು ಅಮಾನುಷವಾಗಿ ಹತ್ಯೆ ಮಾಡಿದ ವ್ಯಕ್ತಿ; ಹಗ್ಗದಲ್ಲಿ ಕಳೇಬರ ಎಳೆದೊಯ್ದು ವಿಕೃತಿ

Street Dog Murder
Published on

ಲಖನೌ: ಅಮಾನವೀಯಕರ ಘಟನೆ ಒಂದರಲ್ಲಿ ವ್ಯಕ್ತಿ ಓರ್ವ ಬೀದಿ ನಾಯಿಯನ್ನು ಕೊಂದು ಅದರ ಶವವನ್ನು ಹಗ್ಗದಿಂದ ಕಟ್ಟಿ ಚರಂಡಿಗೆ ಬಿಸಾಡಿರುವ ಘಟನೆ ಉತ್ತರಪ್ರದೇಶದ ಲಖನೌನಲ್ಲಿ ನಡೆದಿದೆ.

ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಆರೋಪಿಯನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯನ್ನು ಪಪ್ಪು ಎಂದು ಗುರುತಿಸಲಾಗಿದ್ದು ಆತನ ಬಂಧನಕ್ಕಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಆರೋಪಿ ಪಪ್ಪು ನಾಯಿಯನ್ನು ಮತ್ತೋರ್ವ ವ್ಯಕ್ತಿಯ ಸಹಾಯದೊಂದಿಗೆ ಕೋಲಿನಿಂದ ಹಿಗ್ಗಾಮುಗ್ಗಾ ಸಾಯುವ ರೀತಿ ಥಳಿಸುತ್ತಾನೆ. ಬಳಿಕ ಅದರ ಮೃತದೇಹವನ್ನು ಹಗ್ಗದಿಂದ ಕಟ್ಟಿ 100 ಮೀಟರ್​ ದೂರ ಎಳೆದುಕೊಂಡು ಹೋಗಿ ಚರಂಡಿಯಲ್ಲಿ ಎಸೆಯುವುದು ಕಂಡು ಬರುತ್ತದೆ.

ಘಟನೆಯೂ ನೌಬಸ್ತಾ ಮಾರುಕಟ್ಟೆ ಪ್ರದೇಶದಲ್ಲಿ ನಡೆದಿದೆ. ಈ ಕುರಿತು ಪಶ್ಚಿಮ ವಲಯದ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಎಡಿಸಿಪಿ) ಚಿರಂಜೀವಿ ನಾಥ್ ಸಿನ್ಹಾ ಪ್ರತಿಕ್ರಿಯಿಸಿದ್ದು ಪ್ರಸ್ತುತ ಈ ವಿಷಯದ ಬಗ್ಗೆ ತನಿಖೆ ನಡೆಯುತ್ತಿದ್ದು, ಆತನ ಬಂಧನಕ್ಕಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net