ಅತ್ತೆಯನ್ನು ಕುತ್ತಿಗೆ ಸೀಳಿ ಹತ್ಯೆ ಗೈದ ಅಳಿಯ.. ಕಾರಣ ತೀರ ಕ್ಷುಲ್ಲಕ

Murder
Published on

ಮುಂಬೈ: ಪತ್ನಿ ತಾಯಿಯ ಮನೆಗೆ ಹೋಗುವುದನ್ನು ನಿಲ್ಲಿಸದಿರುವುದರಕ್ಕೆ ಪತಿ ಆಕೆಯ ತಾಯಿಯನ್ನೇ ಕುತ್ತಿಗೆ ಸೀಳಿ ಕೊಲೆಗೈದ ಘಟನೆ ನಡೆಇದೆ.
ಈ ಘಟನೆ ಮಹಾರಾಷ್ಟ್ರದ ನವ ಮುಂಬಯಿಯ ತಾಲೋಜ ಸೆಕ್ಟರ್ 11 ರಲ್ಲಿ ಮೃತ ಮಹಿಳೆಯ ನಿವಾಸದಲ್ಲಿ ನಡೆದಿದೆ. ಪ್ರಫುಲ್ ಸಿಯಾಲಿ ಎಂಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ರೇಖಾ ಶರ್ಮಾ ಕೊಲೆಗೀಡಾದವಳು. ಆಕೆಯ ಕಿರಿಯ ಮಗಳು ಎರಡು ವರ್ಷಗಳ ಹಿಂದೆ ವಿದ್ಯುತ್ ತಂತ್ರಜ್ಞ ಸಿಯಾಲಿಯೊಂದಿಗೆ ಮದುವೆಯಾದಳು.

ಹೆಂಡತಿ ತನ್ನ ತಾಯಿ ಮನೆಗೆ ಹೋಗುವುದನ್ನು ನಿಲ್ಲಿಸುವಂತೆ  ಸಿಯಾಲಿ  ಕೇಳಿಕೊಂಡಿದ್ದ, ಆದರೆ ಆಕೆ ಈ ಮಾತನ್ನು ತಿರಸ್ಕರಿಸಿರುವುದೇ ಈ ಕೊಲೆಗೆ ಕಾರಣವೆನ್ನಲಾಗಿದೆ.
ಕೊಲೆಯ ಬಗ್ಗೆ ಮಾಹಿತಿ ಪಡೆದ ನಂತರ ತಲೋಜಾ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಅವರು ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದ್ದು, ಸೋಮವಾರ ಬೆಳಿಗ್ಗೆ ಆಕೆಯ ಪತಿ ಕೆಲಸಕ್ಕೆ ಹೋಗಿದ್ದಾಗ ಶರ್ಮಾ ಅವರ ಮನೆಗೆ ರೇನ್ ಕೋಟ್ ಧರಿಸಿದ ವ್ಯಕ್ತಿಯೊಬ್ಬ ಬಂದಿದ್ದ. ನಂತರ ಪೊಲೀಸರು ಕುಟುಂಬ ಸದಸ್ಯರೊಂದಿಗೆ ವಿಚಾರಿಸಿದ್ದಲ್ಲದೆ ಕರೆ ವಿವರಗಳನ್ನು ಪರಿಶೀಲಿಸಿದ್ದಾರೆ.
ಅಪರಾಧದಲ್ಲಿ ಸಿಯಾಲಿ ಭಾಗಿಯಾಗಿರುವ ಬಗ್ಗೆ ಅವರಿಗೆ ಅನುಮಾನ ಬಂದಿದೆ. ರೇನ್‌ಕೋಟ್ ಧರಿಸಿದ ವ್ಯಕ್ತಿ ಸಿಯಾಲಿ ಎಂಬುದು ತನಿಖೆಯಿಂದ ತಿಳಿದುಬಂದಿದೆ. ತರುವಾಯ, ಆತನನ್ನು ಬಂಧಿಸಲಾಯಿತು. "ತಾಂತ್ರಿಕ ವಿಶ್ಲೇಷಣೆ ಮತ್ತು ಸಿಸಿಟಿವಿ ದೃಶ್ಯಾವಳಿಗಳ ಜೊತೆಗೆ, ನಾವು ಆರೋಪಿಯನ್ನು ಮಂಗಳವಾರ ಬಂಧಿಸಿದ್ದೇವೆ.

ಘಟನೆಗಳ ಅನುಕ್ರಮವನ್ನು ಒಟ್ಟುಗೂಡಿಸಲು ಮತ್ತು ಕೊಲೆ ಶಸ್ತ್ರಾಸ್ತ್ರವನ್ನು ವಶಪಡಿಸಿಕೊಳ್ಳಲು ನಾವು ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಹಿರಿಯ ಇನ್​​ಸ್ಪೆಕ್ಟರ್ ಕಾಶಿನಾಥ್ ಚವ್ಹಾಣ್ ತಿಳಿಸಿದ್ದಾರೆ.
ತನ್ನ ಹೆಂಡತಿ ಪದೆ ಪದೆ ಆಕೆಯ ತಾಯಿಯ ಮನೆಗೆ ಹೋಗುವುದನ್ನು ನಿಲ್ಲಿಸಬೇಕೆಂದು ಹೆಂಡತಿಗೆ ತಿಳಿಸಿದ್ದ. ಆದರೆ ಆಕೆ ಹಾಗೆ ಮಾಡಲಿಲ್ಲ. ಇದರಿಂದ ಉದ್ರಿಕ್ತನಾದ ಗಂಡ ಶರ್ಮಾಳನ್ನೇ ಕೊಲೆ ಮಾಡಲು ನಿರ್ಧರಿಸಿದ ಎಂದು ಇನ್​​ಸ್ಪೆಕ್ಟರ್ ರಾಜು ಅಡಾಗಲ್ ತಿಳಿಸಿದ್ದಾರೆ. ಆರೋಪಿಯ ವಿರುದ್ಧ ಅಪರಾಧ ದಾಖಲಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net