

ಅಮೆರಿಕಾ: ಸಾಮಾನ್ಯವಾಗಿ ಬೋಳು ತಲೆ ಇರುವವರು ತಮ್ಮ ಕೂದಲಿಲ್ಲದ ತಲೆಯನ್ನು ನಾನಾ ಬಗೆಯ ಟೋಪಿಗಳಿಂದ ಮುಚ್ಚಿಕೊಳ್ಳುತ್ತಾರೆ ಅಥವಾ ವಿಗ್ ಬಳಸುವ ಮುಖೇನ ಸಾರ್ವಜನಿಕರ ನಗೆಯಿಂದ ದೂರ ಉಳಿಯಲು ಬಯಸುತ್ತಾರೆ. ಈ ಎರಡು ಆಯ್ಕೆ ಬಿಟ್ಟರೆ ಬೊಕ್ಕು ತಲೆ ಮರೆಮಾಚಲು ಇನ್ಯಾವುದು ಸರಿಹೊಂದಲ್ಲ. ಆದ್ರೆ, ಇಲ್ಲೊಬ್ಬ ವ್ಯಕ್ತಿ ತಾನು ಹೊಸತನ್ನು ಬಯಸುವ ಜೀವ ಎಂಬುದನ್ನು ವಿಭಿನ್ನ ರೀತಿಯಲ್ಲಿ ತೋರಿಸಿರುವುದು ಇದೀಗ ಹಲವರ ನಗುವಿಗೆ ಕಾರಣವಾಗಿದೆ.
ಇದನ್ನೂ ಓದಿ: ಬ್ಯಾಟರಿ ಕಳವು ಮಾಡಿದ ಆರೋಪಿಗಳ ಬಂಧನ
ಅಮೆರಿಕಾದ ನ್ಯೂಯಾರ್ಕ್ನ ಸಬ್ವೇಯಲ್ಲಿ ಪ್ರಯಾಣಿಸುತ್ತಿದ್ದ ಅನಾಮಧೇಯ ವ್ಯಕ್ತಿಯೊಬ್ಬ ತನ್ನ ಬೊಕ್ಕು ತಲೆ ಮುಚ್ಚಿಕೊಳ್ಳಲು ಹ್ಯಾಟ್ ಅಥವಾ ವಿಗ್ ಬಳಸುವ ಬದಲಿಗೆ ಬೇಕರಿ ತಿನಿಸಾದ ಬನ್ ಅನ್ನು ತಲೆಯ ಮೇಲಿಟ್ಟುಕೊಂಡ ದೃಶ್ಯ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವಿಡಿಯೋದಲ್ಲಿ ಸಬ್ವೇ ಪ್ರಯಾಣಿಕ ತನ್ನ ತಲೆ ಮೇಲೆ ದೊಡ್ಡ ಗಾತ್ರದ ಬನ್ ಅನ್ನು ಇಟ್ಟುಕೊಂಡಿರುವುದು ಕಂಡುಬಂದಿದೆ. ಸಾರ್ವಜನಿಕರ ಸಾರಿಗೆಯಲ್ಲಿ ಈತನ ತಲೆಯನ್ನೇ ಸೂಕ್ಷ್ಮವಾಗಿ ಗಮನಿಸಿದ ಇತರೆ ಪ್ರಯಾಣಿಕರು, ಕುಳಿತಲ್ಲೇ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಕೆಲವರು ಇಂತಹ ದೃಶ್ಯ ಹಿಂದೆಂದೂ ನೋಡಿರಲಿಲ್ಲ. ಇದು ತುಂಬ ವಿಚಿತ್ರವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ,(ಏಜೆನ್ಸೀಸ್).