ಸ್ಟ್ಯಾಚು ಎಂದು ನಿಜವಾದ ಮೊಸಳೆ ಮೇಲೆ ಹಾರಿದ ವ್ಯಕ್ತಿ: ಆಸ್ಪತ್ರೆಯಲ್ಲಿ ಬಿತ್ತು 50 ಹೊಲಿಗೆ!Crocodile Attack

Crocodile Attack
Published on

Crocodile Attack: ಮೊಸಳೆ ಅಂದ್ರೆ ಯಾರಿಗೆ ಭಯ ಇಲ್ಲ ಹೇಳಿ. ನದಿ, ಕೆರೆಗಳಲ್ಲಿ ಈಜಲು ಹೋದಾಗ ಇದರಲ್ಲಿ ಮೊಸಳೆ ಇರಬಹುದೇ ಎಂದು ಯೋಚನೆ ಬರುವುದು ಸಹಜ. ಯಾಕೆಂದರೆ ಇದರ ಬಾಯಿಗೆನಾದರೂ ನಾವು ಸಿಕ್ಕರೆ ಅದಕ್ಕೆ ಆಹಾರ ಆಗುವುದು ಖಂಡಿತ. ಹೀಗಾಗಿ ಈ ಮೊಸಳೆ ಕಂಡರೆ ಎಲ್ಲರೂ ಭಯ ಪಡುತ್ತಾರೆ. ಆದರೆ ಇಲ್ಲೊಬ್ಬ ಯುವಕ ಮೊಸಳೆ ಕಂಡು ಮಾಡಿದ್ದೇನು ಗೊತ್ತಾ? ಅದನ್ನು ನೋಡಿದ್ರೆ ಅಚ್ಚರಿ ಪಡುವುದಂತೂ ಖಂಡಿತ! ಹಾಗಾದ್ರೆ ಬನ್ನಿ ತಿಳಿಯೋಣ.

29 ವರ್ಷದ ವ್ಯಕ್ತಿಯೊಬ್ಬ ಮೃಗಾಲಯಕ್ಕೆ ಆಕಸ್ಮಿಕ ಭೇಟಿ ನೀಡಿದಾಗ, ಆತ ನಿಜವಾದ ಮೊಸಳೆಯನ್ನು ನೋಡಿ ಸ್ಟ್ಯಾಚು ಎಂದು ಭಾವಿಸಿ 50 ಕ್ಕೂ ಹೆಚ್ಚು ಹೊಲಿಗೆಗಳನ್ನು ಹಾಕಿಕೊಂಡ ಘಟನೆ ಕಬುಗ್ ದ್ವೀಪದ ಮ್ಯಾಂಗ್ರೋವ್ ಮತ್ತು ವೆಟ್‌ಲ್ಯಾಂಡ್ಸ್ ಪಾರ್ಕ್‌ನಲ್ಲಿ ನಡೆದಿದೆ.

ಮನಿಲಾ ಬುಲೆಟಿನ್ ಎನ್ನುವ ವ್ಯಕ್ತಿ ಮೃಗಾಲಯಕ್ಕೆ ಒಳಗೆ ಹೋದ ನಂತರ, ಅಲ್ಲಿನ ನೀರಿನಲ್ಲಿದ್ದ ಮೊಸಳೆಯನ್ನು ನೋಡಿ, ಅದು ನಿಜವಾದ ಮೊಸಳೆಯಲ್ಲ ಸ್ಟ್ಯಾಚು ಎಂದು ತಿಳಿದು ನೀರಿನಲ್ಲಿ ಇಳಿದು ಮೊಸಳೆಯನ್ನು ಮುಟ್ಟಲು ಮುಂದಾಗಿದ್ದಾನೆ. ಆದರೆ ಅಲ್ಲಿದ ನಿಜವಾದ ದೈತ್ಯಾಕಾರದ ಮೊಸಳೆ ಅವನು ನೀರಿಗಿಳಿಯುತ್ತದ್ದಂತೆ ದಾಳಿ ಮಾಡಿದೆ.

ಇದೀಗ ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​​ ವೈರಲ್​​ ಆಗಿದ್ದು, ಮೊಸಳೆಯೂ ಆ ವ್ಯಕ್ತಿಯ ಕಾಲು ಮತ್ತು ತೋಳಿನ ಮೇಲೆ ದಾಳಿ ಮಾಡಿದೆ, ನಂತರ ಆ ವ್ಯಕ್ತಿಯನ್ನು ಮೊಸಳೆಯ ದಾಳಿಯಿಂದ ಕಷ್ಟಪಟ್ಟು ರಕ್ಷಿಸಲಾಗಿದೆ. ಆದರೂ ಅವರನ್ನು ರಕ್ಷಿಸುವ ಹೊತ್ತಿಗೆ, ಹಲವಾರು ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ 50 ಕ್ಕೂ ಹೆಚ್ಚು ಹೊಲಿಗೆಗಳನ್ನು ಹಾಕಿದ್ದಾರೆ.

ವಿಡಿಯೋ ಇಲ್ಲಿದೆ

ನೆಟ್ಟಿಗರ ಪ್ರತಿಕ್ರಿಯೆ ಈ ವಿಡಿಯೋವನ್ನು Xನ 'XTechPulse' ಖಾತೆಯಿಂದ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ ನೆಟ್ಟಿಗರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಒಬ್ಬ ನೆಟ್ಟಿಗ, "ಇಂತಹ ಪ್ರಕರಣಗಳಿಗೆ ಈ ಸ್ಥಳದಲ್ಲಿ ಶಸ್ತ್ರಾಸ್ತ್ರಗಳು ಏಕೆ ಇಲ್ಲ? ಬೇರೆ ದಾರಿಯಿಲ್ಲದಿದ್ದರೂ, ಪ್ರಪಂಚದ ಉಳಿದ ಭಾಗಗಳಲ್ಲಿ ಅವರು ಪ್ರಾಣಿಗಳನ್ನು ಬಲಿ ನೀಡುತ್ತಾರೆ. ಎಷ್ಟು ಹಾಸ್ಯಾಸ್ಪದ," ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ "ಈ ವ್ಯಕ್ತಿ ತಪ್ಪಾಗಿ ಭಾವಿಸಿದ ಏಕೈಕ ವಿಷಯವೆಂದರೆ ಮೊಸಳೆ ಎಷ್ಟು ಆಕ್ರಮಣಕಾರಿಯಾಗಿರಬಹುದು ಎಂಬುದು. ಅದು ನಿಜವೆಂದು ಅವನಿಗೆ ತಿಳಿದಿತ್ತು ಮತ್ತು ಅದನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದು ಅವನು ಭಾವಿಸಿದನು" ಎಂದಿದ್ದಾನೆ. ಇನ್ನೊಬ್ಬ ನೆಟ್ಟಿಗ "ಅವನು ಜೀವಂತವಾಗಿರುವುದಕ್ಕೆ ತುಂಬಾ ಸಂತೋಷವಾಯಿತು" ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಈ ವಿಡಿಯೋವನ್ನು 1K ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net