

ಉತ್ತರಪ್ರದೇಶ: ವ್ಯಕ್ತಿಯೊಬ್ಬರು ಬಾವಿಯೊಳಗೆ ಬಿದ್ದ ಮೇಕೆಯನ್ನು ರಕ್ಷಣೆ ಮಾಡುವ ಪ್ರಯತ್ನದಲ್ಲಿ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ವರದಿಯಾಗಿದೆ.
ಘಟನೆಯ ವಿವರ: ಮೃತ ವ್ಯಕ್ತಿಯನ್ನು ಸತ್ತಾನ್ ಎಂದು ಗುರುತಿಸಲಾಗಿದ್ದು, ತಾನು ಸಾಕಿದ ಮೇಕೆ ಬಾವಿಯೊಳಗೆ ಬಿದ್ದ ಬಗ್ಗೆ ತಿಳಿದು, ನೀರಿನಿಂದ ಹೊರಬರಲು ಪರದಾಡುತ್ತಿದ್ದ ಮೇಕೆಯನ್ನು ರಕ್ಷಿಸಲು ಮುಂದಾದರು. ಬಾವಿಗೆ ಜಿಗಿದ ಅವರು, ಮೇಕೆಯ ಜತೆಗೆ ಸುರಕ್ಷಿತವಾಗಿ ಹೊರಗೆ ಬರಲು ಸಾಧ್ಯವಾಗಿಲ್ಲ. ಈ ವೇಳೆ ಸ್ಥಳದಲ್ಲಿದ್ದ ಗ್ರಾಮಸ್ಥರು ಹಲವರ ಸಹಾಯ ಕೋರಿದ್ದಾರೆ.
ಕೆಲ ಸಮಯದ ನಂತರ ಗ್ರಾಮಸ್ಥರ ನಿರಂತರ ಪ್ರಯತ್ನದ ಬಳಿಕ ಸತ್ತಾನ್ ಮತ್ತು ಮೇಕೆಯನ್ನು ಯಶಸ್ವಿಯಾಗಿ ಬಾವಿಯಿಂದ ಹೊರ ತಂದಿದ್ದಾರೆ. ಕೂಡಲೇ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಪರಿಶೀಲನೆ ನಡೆಸಿ ಸತ್ತಾನ್ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ,(ಏಜೆನ್ಸೀಸ್).