ಅಬ್ಬಬ್ಬಾ..ಸುಡು ಬಿಸಿಲಿನ ಧಗೆ; ಎಮ್ಮೆಗಳ ಕೊಟ್ಟಿಗೆಗೆ AC ಹಾಕಿಸಿದ ರೈತ

viral video
Published on

ನವದೆಹಲಿ: ತನ್ನ ಸಾಕುಪ್ರಾಣಿಗಳನ್ನು ಶಾಖದಿಂದ ರಕ್ಷಿಸಲು ವ್ಯಕ್ತಿಯೊಬ್ಬ ಮಾಡಿದ್ದನ್ನು ನೋಡಿ ಸಾಮಾಜಿಕ ಮಾಧ್ಯಮ ಬಳಕೆದಾರರೂ ಶಾಕ್ ಆಗಿದ್ದಾರೆ. ಇದೇ ಕಾರಣಕ್ಕೆ ಈ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.

ಈ ಋತುವಿನಲ್ಲಿ ಮನುಷ್ಯರಷ್ಟೇ ಅಲ್ಲ ಪ್ರಾಣಿಗಳಿಗೂ ಬಿಸಿಲಿನ ಬೇಗೆ ಎದುರಾಗಿದೆ. ಸುಡು ಬಿಸಿಲಿನಲ್ಲಿ ಜನ ಮನೆಯಿಂದ ಹೊರಗೆ ಕಾಲಿಡಲು ಹಿಂದೇಟು ಹಾಕುತ್ತಿದ್ದಾರೆ. ಹೆಚ್ಚಿನವರು ಫ್ಯಾನ್, ಕೂಲರ್ ಅಥವಾ ಎಸಿ ಮೊರೆ ಹೋಗುತ್ತಿದ್ದಾರೆ.

ರೈತನೊಬ್ಬ ತಾನು ಸಾಕಿದ ಎಮ್ಮೆಗಳ ಕೊಟ್ಟಿಗೆಗೆ ಎಸಿ ಹಾಕಿಸಿದ್ದಾನೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ?: ಒಂದು ಕೋಣೆಯಲ್ಲಿ ಮೂರು ಎಮ್ಮೆಗಳು ಮತ್ತು ಎರಡು ಕರುಗಳು ಇರುವುದನ್ನು ನೋಡಬಹುದು. ಅಚ್ಚರಿಯ ಸಂಗತಿಯೆಂದರೆ ಎಸಿಯ ಜೊತೆಗೆ ಲೈಟ್, ಫ್ಯಾನ್ ಎಲ್ಲ ವ್ಯವಸ್ಥೆ ಮಾಡಲಾಗಿದೆ. ವಿಡಿಯೋ ಹಂಚಿಕೊಂಡ ಕೇವಲ 6 ದಿನಗಳಲ್ಲಿ 10ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net