ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ಮಗ; ಕಾರಣವೇನು ಗೊತ್ತಾ?

electric pole
ಸಾಂದರ್ಭಿಕ ಚಿತ್ರ
Published on

ಒಡಿಶಾ: ಮಗನೊಬ್ಬ ತಾಯಿಯನ್ನು ವಿದ್ಯುತ್​ ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಈ ಘಟನೆ ಕಿಯೋಂಜಾರ್ ಜಿಲ್ಲೆಯಲ್ಲಿ ನಡೆದಿದೆ.

70 ವರ್ಷದ ಮಹಿಳೆ ಸರಸಪಸಿ ಗ್ರಾಮದ ತನ್ನ ಕಿರಿಯ ಮಗನ ಜಮೀನಿನಿಂದ ಹೂಕೋಸು ತಂದು ತಿಂದ ಬಳಿಕ ವಿವಾದ ಉಂಟಾಗಿದೆ. ವಾಗ್ವಾದ ಹೆಚ್ಚಾಗುತ್ತಿದ್ದಂತೆ ಆಕೆಯ ಮಗ ಆಕೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾನೆ.

ಮಗ ತಾಯಿಗೆ ಹೊಡೆದು ಹಿಂಸೆ ಕೊಡುತ್ತಿರುವುದನ್ನು ತಡೆಯಲು ಗ್ರಾಮಸ್ಥರು ಮಧ್ಯೆ ಪ್ರವೇಶಿಸಲು ಹತ್ನಿಸಿದಾಗ ಅವರಿಗೂ ಬೆದರಿಕೆಯೊಡ್ಡಲಾಯಿತು. ಮಹಿಳೆಯನ್ನು ರಕ್ಷಿಸಿ ಬಾಸುದೇವಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ. ನಂತರ ಗ್ರಾಮಸ್ಥರು ಪೊಲೀಸರಿಗೆ ಈ ವಿಚಾರ ತಿಳಿಸಿದ್ದಾರೆ.

ಪೊಲೀಸರು ಘಟನೆಯ ಬಗ್ಗೆ ಮಹಿಳೆಯನ್ನು ಕೇಳಿ ಮಾಹಿತಿ ಕಲೆ ಹಾಕಿದ್ದಾರೆ. ಆಕೆಯ ಮಗನ ವಿರುದ್ಧ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಐಐಸಿ ತ್ರಿನಾಥ್ ಸೇಥಿ ಹೇಳಿದ್ದಾರೆ.

ಮಹಿಳೆಗೆ ಇಬ್ಬರು ಗಂಡು ಮಕ್ಕಳಿದ್ದು, ಹಿರಿಯ ಮಗ ಕೆಲವು ವರ್ಷಗಳ ಹಿಂದೆ ತೀರಿಕೊಂಡಿದ್ದಾನೆ. ಮತ್ತೊಬ್ಬ ಮಗನ ಜತೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವೃದ್ಧೆ ಒಂಟಿಯಾಗಿದ್ದಾಳೆ.ಜೀವನೋಪಾಯಕ್ಕೆ ಬೇರೆ ದಾರಿಯಿಲ್ಲದ ಮಹಿಳೆಯು ಸರ್ಕಾರಿ ಪಡಿತರ ಮತ್ತು ಇತರ ಗ್ರಾಮಸ್ಥರ ಕರುಣೆಯಿಂದ ಜೀವನ ನಡೆಸುತ್ತಿದ್ದರು.ಹಣದ ಕೊರತೆಯಿಂದ ಬಳಲುತ್ತಿದ್ದ ಸಂತ್ರಸ್ತೆ ಇತ್ತೀಚೆಗೆ ಮಗನ ಜಮೀನಿನಲ್ಲಿದ್ದ ಹೂಕೋಸನ್ನು ನೆರೆಯವರಿಗೆ ಮಾರಾಟ ಮಾಡಿದ್ದರು. ಈ ಘಟನೆಯ ಬಗ್ಗೆ ಆಕೆಯ ಮಗನಿಗೆ ತಿಳಿದಾಗ, ಅವನು ತನ್ನ ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಅಮಾನುಷವಾಗಿ ಥಳಿಸಿದನು. ಡಿಸೆಂಬರ್ 20 ರಂದು ಈ ಘಟನೆ ನಡೆದಿದೆ.ಮಗನ ಅಮಾನುಷ ಕೃತ್ಯದ ವಿಡಿಯೋ ಮತ್ತು ಫೋಟೋ ಕೆಲವೇ ದಿನಗಳಲ್ಲಿ ವೈರಲ್ ಆಗಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net