

ಇಂದೋರ್: ನಾಲ್ಕು ವರ್ಷದ ಮರಿಮೊಮ್ಮಗನನ್ನು ಮುತ್ತಾತ ಹೊಡೆದು ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ.
ಏಪ್ರಿಲ್ 7ರಂದು ಘಟನೆ ನಡೆದಿದ್ದು ಪ್ರಕರಣ ಸಂಬಂಧ ಶೋಭರಾಮ್ ಚೌಧರಿ(80)ಯನ್ನು ಬಂಧಿಸಲಾಗಿದ್ದು ಮೃತ ಬಾಲಕನನ್ನು ಶ್ರೇಯಾಂಶ್(4) ಎಂದು ಗುರುತಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಿತುಕಾ ವಸಲ್ ಕೌಟುಂಬಿಕ ಕಲಹದ ಕಾರಣ ಶ್ರೇಯಾಂಶ್ ಹಾಗೂ ಅವರ ತಾಯಿ ನೀತು ಪ್ರತ್ಯೇಕವಾಗಿ ಅವರ ತವರು ಮನೆಯಲ್ಲಿ ನೆಲೆಸಿದ್ದರು.
ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ನೀತು ಹಾಗೂ ಅವರ ಪುತ್ರನನ್ನು ಹೊರೆ ಎಂದು ಪರಿಗಣಿಸಿ ತವರು ಮನೆಯಲ್ಲಿ ಮಾನಸಿಕ ಕಿರುಕುಳ ಕೊಡಲಾಗುತ್ತಿತ್ತು. ಈ ವೇಳೆ ಆರೋಪಿ ಶೋಭರಾಮ್ ಬಳಿ ಆಕೆಯ ಪೋಷಕರು ಮಗು ಬೆಳೆದು ದೊಡ್ಡವನಾದ ಮೇಲೆ ಆಸ್ತಿಯಲ್ಲಿ ಪಾಲು ಕೇಳಬಹುದು ಎಂದು ಹೇಳಿದ್ಧಾರೆ.
ಈ ವೇಳೆ ಆರೋಪಿಯೂ ಮಗುವಿನಿಂದ ಸಮಸ್ಯೆಯಾಗುತ್ತಿದೆ ಎಂದು ಭಾವಿಸಿ ಆತನನ್ನು ಮುಗಿಸಿದರೆ ಇದಕ್ಕೊಂದು ಅಂತ್ಯ ಹಾಡಬಹುದು ಎಂದು ಪ್ಲ್ಯಾನ್ ಹಾಕಿದ್ಧಾನೆ. ಪತ್ರಿ ರಾತ್ರಿ ಮರಿಮೊಮ್ಮಗ ತನ್ನ ಜೊತೆ ಮಲಗುತ್ತಿದ್ದ ಅವಕಾಶವನ್ನು ಬಳಸಿಕೊಂಡ ಆರೋಪಿ ಉಸಿರುಗಟ್ಟಿಸಿ ಹತ್ಯೆಗೈದಿದ್ಧಾನೆ.
ಕುಟುಂಬಸ್ಥರು ನೀಡಿರುವ ಹೇಳಿಕೆಯನ್ನು ಆಧರಿಸಿ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಿತುಕಾ ವಸಲ್ ಮಾಹಿತಿ ನೀಡಿದ್ಧಾರೆ.