

ಬೆಂಗಳೂರು: ನಾಯಿಯೊಂದಿಗೆ ಏಕಾಂಗಿಯಾಗಿ ನೆಲೆಸಿದ್ದವ ನಾಯಿಬೆಲ್ಟ್ನಿಂದ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡ ಪ್ರಕರಣ ನಡೆದಿದೆ. ರಾಜಧಾನಿ ಬೆಂಗಳೂರಿನಲ್ಲಿ ಇಂಥದ್ದೊಂದು ಘಟನೆ ನಡೆದಿದೆ.
ಆರ್ಯಮಾನ್ ಘೋಷ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಮೈಕೋ ಬಡಾವಣೆಯ ಸಾರ್ವಭೌಮನಗರದ ಮನೆಯೊಂದರಲ್ಲಿ ಬಾಡಿಗೆಗೆ ಇದ್ದ ಈತ, ತನ್ನ ಸಾಕುನಾಯಿಯೊಂದಿಗೆ ಏಕಾಂಗಿಯಾಗಿ ನೆಲೆಸಿದ್ದ. ನಿನ್ನೆ ಆ ನಾಯಿಬೆಲ್ಟ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ದ ಈತ ಇತ್ತಿಚೆಗೆ ಖಿನ್ನತೆಯಿಂದ ಬಳಲುತ್ತಿದ್ದ ಎಂದು ಹೇಳಲಾಗಿದೆ. ನಿನ್ನೆ ಈತ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ಇಂದು ಬೆಳಕಿಗೆ ಬಂದಿದೆ. 'ನನ್ನ ಸಾವಿಗೆ ನಾನೇ ಕಾರಣ' ಎಂದು ಬರೆದಿರುವ ಡೆತ್ನೋಟ್ ಕೂಡ ಸಿಕ್ಕಿದೆ. ಮೈಕೋ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.