VIDEO| ಡೇಂಜರಸ್ ಶಾರ್ಕ್ ಬಾಯಿಗೆ ಕೈಹಾಕಿ ಕ್ಯಾಮರಾಗೆ ಪೋಸ್​ ನೀಡಿದ ವ್ಯಕ್ತಿ: ಮುಂದೇನಾಯ್ತು?

Shark
Published on

ನ್ಯೂಯಾರ್ಕ್​: ಸಮುದ್ರದಲ್ಲಿ ಶಾರ್ಕ್​ಗಿಂತ ಅಪಾಯಕಾರಿ ಜೀವಿ ಇನ್ನೊಂದಿಲ್ಲ. ಇದಕ್ಕೆ ಪುರಾವೆಯಾಗಿ ಎಷ್ಟೋ ಸಿನಿಮಾಗಳಲ್ಲಿ ಶಾರ್ಕ್​ ದಾಳಿ ಕುರಿತಾದ ದೃಶ್ಯಗಳನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಶಾರ್ಕ್​ಗೆ ಹೆದರದೆ ಅದರ ದವಡೆಯನ್ನು ಹಿಡಿದು ಕ್ಯಾಮೆರಾಗೆ ಪೋಸ್​ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಅಮೆರಿಕದ ಕೇಪ್​ ಹೆನ್ಲೊಪನ್​ ರಾಜ್ಯದ ಡೆಲಾವೆರ್​ನಲ್ಲಿರುವ ಪಾರ್ಕ್ ಬೀಚ್​ನಲ್ಲಿ​ ಈ ಘಟನೆ ನಡೆದಿರುವುದಾಗಿ ದಿ ಮಿರರ್​​ ಪತ್ರಿಕೆ ವರದಿ ಮಾಡಿದೆ. ಇದನ್ನೂ ಓದಿ: ವಿಕ್ಟೋರಿಯಾದಿಂದ ತಪ್ಪಿಸಿಕೊಂಡಿದ್ದ ಕರೊನಾ ಸೋಂಕಿತ ಸಿಕ್ಕಿಬಿದ್ದಿದ್ಹೇಗೆ?

ಡೆಲಾವೆರ್​ ನಿವಾಸಿ ರಾಚೆಲ್​ ಫಾಸ್ಟರ್​ ಎಂಬಾತ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದು, ವೈರಲ್​ ಆಗಿದೆ. ವಿಡಿಯೋದಲ್ಲಿ ಸಮುದ್ರ ದಡದ ನೀರಿನಲ್ಲಿ ಮಧ್ಯಮ ಗಾತ್ರದ ಶಾರ್ಕ್​ ಹಿಡಿದುಕೊಂಡು ಅದರ ಬಾಯಿಯನ್ನು ಎರಡು ಕೈಗಳಿಂದ ಎಳೆದಿಡಿದು ಕ್ಯಾಮರಾಗೆ ಪೋಸ್​ ನೀಡಿರುವುದನ್ನು ಕಾಣಬಹುದಾಗಿದೆ.

ಅನೇಕ ನೆಟ್ಟಿಗರು ಶಾರ್ಕ್​ ಹಿಡಿದಿದ್ದರ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ. ನಿಮ್ಮ ರಾಷ್ಟ್ರದಲ್ಲಿ ಶಾರ್ಕ್​ ಹಿಡಿದು ಬಿಡುವ ಕಾನೂನಿದೆಯೇ? ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಫಾಸ್ಟರ್​, ಯಾವುದೇಮ ನಿಯಮವನ್ನು ನಾನು ಉಲ್ಲಂಘಿಸಿಲ್ಲ. ನಿಯಮಾವಳಿಯಲ್ಲಿ ಏನಿದೆ? ಅದನ್ನೆ ಅನುಸರಿಸಿದ್ದೇನೆ. ನಂತರ ಶಾರ್ಕ್​ ಅನ್ನು ಸುರಕ್ಷಿತವಾಗಿ ಬಿಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಹೀಗಿದ್ದರೂ ಅನೇಕರು ಫಾಸ್ಟರ್​ ಅವರನ್ನು ಟೀಕಿಸುವುದನ್ನು ನಿಲ್ಲಿಸದೇ, ನೀನು ಶಿಕ್ಷಿತನಾಗಬೇಕಿದೆ ಎಂದು ಜರಿದಿದ್ದಾರೆ. ಇದನ್ನೂ ಓದಿ: ಎಎಸ್​ಐ, ಮುಖ್ಯಪೇದೆ ಆತ್ಮಹತ್ಯೆ ಬೆನ್ನಲ್ಲೇ ಮತ್ತೊಬ್ಬ ಪೇದೆ ಆತ್ಮಹತ್ಯೆಗೆ ಶರಣು

ಭಾನುವಾರ ಅಪ್​ಲೋಡ್​ ಮಾಡಿರುವ ವಿಡಿಯೋಗೆ ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಈ ಬಗ್ಗೆ ನಿಮಗೆ ಏನನಿಸುತ್ತದೆಯೋ ಅದನ್ನು ಕಾಮೆಂಟ್​ ಮಾಡಬಹುದು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net