ಈತ ಟ್ವಿಟರ್​​ನಲ್ಲಿ ಪೋಸ್ಟ್ ಮಾಡಿದ್ದು ಪುಸ್ತಕಗಳ ಫೋಟೋ; ಕೂಡಲೇ ಬಂತು ಮದುವೆ ಪ್ರಪೋಸಲ್!

Books
Published on

ಇಲ್ಲೊಬ್ಬಾತ ತಾನು ಸಂಗ್ರಹಿಸಿರುವ ಬೃಹತ್ ಸಂಖ್ಯೆಯ ಪುಸ್ತಕಗಳ ಫೋಟೋವನ್ನು ಟ್ವಿಟರ್​​ನಲ್ಲಿ ಪೋಸ್ಟ್​ ಮಾಡಿ, ನೆಟ್ಟಿಗರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಎಲ್ಲಕ್ಕಿಂತ ಮುಖ್ಯವಾಗಿ, ಫೋಟೋ ಅಪ್ಲೋಡ್ ಮಾಡುತ್ತಿದ್ದಂತೆ, ಟ್ವಿಟರ್​ ಮೂಲಕವೇ ಆತನಿಗೆ ಮದುವೆ ಪ್ರಪೋಸಲ್​ ಕೂಡ ಬಂದಿದೆ...!

ಶೌಮಿಕ್​ ಎಂಬ ಯುವಕ ತನ್ನ ಕೋಣೆಯ ತುಂಬಿದ ಪುಸ್ತಕಗಳನ್ನೇ ತುಂಬಿರುವ ಫೋಟೋವನ್ನು ಟ್ವಿಟರ್​ನಲ್ಲಿ ಅಪ್ಲೋಡ್ ಮಾಡಿದ್ದಾರೆ. ನಾನು ಲೈಬ್ರರಿಯಲ್ಲೇ ವಾಸಿಸುತ್ತಿದ್ದೇನೆ ಎಂದು ಕ್ಯಾಪ್ಷನ್​ ಕೂಡ ಬರೆದಿದ್ದಾರೆ. ಕೋಣೆಯ ಒಟ್ಟು ಮೂರು ಫೋಟೋಗಳನ್ನು ಅವರು ಶೇರ್ ಮಾಡಿಕೊಂಡಿದ್ದಾರೆ.

ಆ ರೂಂನಲ್ಲಿ ಒಂದು ಕಡೆ ಅಧ್ಯಯನ ಹಾಗೂ ಕೆಲಸ ಎರಡೂ ಸಹಾಯವಾಗುವಂತಹ ಡೆಸ್ಕ್​ ಇದ್ದರೆ, ಇನ್ನೊಂದು ಕಡೆ ಒಂದು ಕುರ್ಚಿ ಹಾಕಲಾಗಿದೆ. ಓದಲು ಅನುಕೂಲವಾಗುವಂತೆ ಎಲ್ಲ ವ್ಯವಸ್ಥೆಯನ್ನೂ ಮಾಡಲಾಗಿದೆ. ಸುಮಾರು 1000 ಪುಸ್ತಕಗಳು ರೂಂನಲ್ಲಿ ಇರಬಹುದು ಎಂದು ಮೇಲ್ನೋಟಕ್ಕೇ ಹೇಳಬಹುದು.

ಫೋಟೋ ಅಪ್ಲೋಡ್ ಮಾಡುತ್ತಿದ್ದಂತೆ ಅದು ಪುಸ್ತಕ ಪ್ರೇಮಿಗಳ ಮನಸು ಕದ್ದಿದೆ. ಬಹುತೇಕರು ಕಾಮೆಂಟ್​ ಮಾಡಿ, ನಾವು ನಿಮ್ಮ ಮನೆಗೆ ಬರುತ್ತಿದ್ದೇವೆ ಎಂದು ಹೇಳಿದ್ದಾರೆ. ಒಂದು ಮೂಲೆ ನನಗಿರಲಿ ಎಂದು ಕೂಡ ಕಾಮೆಂಟ್​ ಹಾಕಿದ್ದಾರೆ.
ಅದೆಲ್ಲಕ್ಕಿಂತಲೂ ಮುಖ್ಯವಾಗಿ ಗಮನಸೆಳೆದಿದ್ದು, ಕಾಮೆಂಟ್​ ಸೆಕ್ಷನ್​​ನಲ್ಲಿ ಕಂಡು ಬಂದ ' ಕ್ಯಾನ್ ಐ ಮ್ಯಾರಿ ಯೂ' ಎಂಬ ಪ್ರಶ್ನೆ. ಓಶಾಜ್ ಎಂಬ ಟ್ವಿಟರ್​ ಅಕೌಂಟ್​​ನಿಂದ ಈ ಕಾಮೆಂಟ್​ ಮಾಡಲಾಗಿದೆ. ಪುಸ್ತಕ ನೋಡಿಯೇ ಮದುವೆ ಪ್ರಪೋಸ್​ ಮಾಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net