VIRAL VIDEO | ರೈಲು ಹತ್ತಲು ಹೋಗಿ ಹಳಿ ಮೇಲೆ ಬಿದ್ದ ವ್ಯಕ್ತಿ; ಪಾರಾಗಿದ್ದೇ ಪವಾಡ!

Untitled design - 2023-09-30T203919.479
Published on

ಬಿಹಾರ: ಚಲಿಸುವ ರೈಲು ಹತ್ತಲು ಹೋಗಿ ಹಳಿಯ ಮೇಲೆ ಬಿದ್ದ ವ್ಯಕ್ತಿ ಪವಾಡದ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಬಿಹಾರದ ಬಗಾಹ ರೈಲ್ವೇ ನಿಲ್ದಾಣದಲ್ಲಿ ಸಂಭವಿಸಿದೆ.

ಬಿಹಾರದ ಬಗಾಹ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲನ್ನು ಹತ್ತಲು ಯತ್ನಿಸಿದ ವ್ಯಕ್ತಿಯೊಬ್ಬ, ಜಾರಿ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಅಂತರಕ್ಕೆ ಬಿದ್ದಿದ್ದಾನೆ. ರೈಲಿನ ಅಡಿಯಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ರೈಲ್ವೇ ಪೊಲೀಸರು ರೈಲು ಹೋಗುವವರೆಗೂ ಅಲ್ಲೇ ಇರಲು ತಿಳಿಸಿದ್ದು, ತದನಂತರ ಆತನನ್ನು ಮೇಲಕ್ಕೆ ಎತ್ತಿದ್ದಾರೆ. ಪವಾಡದಂತೆ ವ್ಯಕ್ತಿ ಪ್ರಾಣಪಾಯದಿಂದ ಪಾರಾಗಿದ್ದು, ಸಣ್ಣ-ಪುಟ್ಟ ಗಾಯಗಳಾಗಿವೆ.

ರೈಲು ಹಳಿ ಮೇಲೆ ಬಿದ್ದ ವ್ಯಕ್ತಿಯನ್ನು 24 ವರ್ಷದ ಪ್ರತೀಕ್ ಕುಮಾರ್ ಎಂದು ಗುರುತಿಸಲಾಗಿದ್ದು, ಬಿಹಾರದ ಬೆಟ್ಟಿಯ ಉತ್ತರವಾರಿ ಪೋಖರಾ ಪ್ರದೇಶದ ನಿವಾಸಿ ಎಂದು ಹೇಳಲಾಗಿದೆ. ಬಿಸ್ಕೆಟ್ ಮತ್ತು ತಂಪು ಪಾನೀಯಗಳನ್ನು ಖರೀದಿಸಲು ರೈಲಿನಿಂದ ಇಳಿದಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net