More

    ಡಾ. ಶಿವಾನಂದ ಜಾಮದಾರ ಅಭಿಪ್ರಾಯ; ಶಿಕ್ಷಣಕ್ಕೆ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಕೊಡುಗೆ ಅಪಾರ

    ಧಾರವಾಡ: ಸ್ವತಂತ್ರ ಪೂರ್ವದಲ್ಲಿ ಮಠ- ಮಾನ್ಯಗಳು ಮತ್ತು ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ ಶಿಕ್ಷಣವನ್ನು ಪ್ರಸಾರ ಮಾಡುವಲ್ಲಿ ಅಭೂತಪೂರ್ವ ಕೊಡುಗೆ ನೀಡಿವೆ. ಸರ್ಕಾರಿ ಶಾಲೆಗಳು ಪ್ರಾರಂಭವಾಗುವ ಮೊದಲೇ ಬಡ ಮಕ್ಕಳಿಗಾಗಿ ಅನೇಕ ವಿದ್ಯಾಸಂಸ್ಥೆಗಳನ್ನು ಆರಂಭಿಸಿ ದೇಶದ ಶೈಕ್ಷಣಿಕ ಅಭಿವೃದ್ಧಿಗೆ ನೆರವಾಗಿವೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಡಾ. ಶಿವಾನಂದ ಜಾಮದಾರ ಹೇಳಿದರು.
    ನಗರದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಟೌನ್‌ಹಾಲ್‌ನಲ್ಲಿ ಶನಿವಾರ ಆಯೋಜಿಸಿದ್ದ ಸಂಸ್ಥೆಯ ೧೪೧ನೇ ಸಂಸ್ಥಾಪನಾ ದಿನಾಚರಣೆ, ಪುಸ್ತಕ ಬಿಡುಗಡೆ ಮತ್ತು ಸಂಸ್ಥಾಪಕರ ವಂಶಸ್ಥರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
    ಬಸವಣ್ಣನವರ `ಷಟಸ್ಥಲದ ವಚನಗಳು’ ಪುಸ್ತಕ ಮರು ಬಿಡುಗಡೆಗೊಳಿಸಿದ ಹಿರಿಯ ಸಾಹಿತಿ ಡಾ. ವೀರಣ್ಣ ರಾಜೂರ ಮಾತನಾಡಿ, ಬಸವಣ್ಣನವರ ವಚನಗಳು ಇಂದಿನ ಜೀವನಕ್ಕೆ ಹೇಳಿ ಮಾಡಿಸಿದಂತಿವೆ. ಅವರ ಕೆಲ ವಚನಗಳನ್ನಾದರೂ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜ ಸುಧಾರಣೆ ಕಟ್ಟಿಟ್ಟ ಬುತ್ತಿ ಎಂದರು.
    ಸ೦ಸ್ಥೆಯ ಗೌರವ ಕಾರ್ಯದರ್ಶಿ ಚಂದ್ರಕಾ೦ತ ಮಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಸಂಸ್ಥಾಪಕರಾದ ರಾವಬಹದ್ದೂರ್ ಗಿಲಗಂಚಿ ಗುರುಶಿದ್ದಪ್ಪ ಮತ್ತು ಅರಟಾಳ ರುದ್ರಗೌಡರರ ಉತ್ತರ ಕರ್ನಾಟಕದಲ್ಲಿ ಶಿಕ್ಷಣವನ್ನು ಬೆಳೆಸುವಲ್ಲಿ ಕೈಗೊಂಡ ಕಾರ್ಯಗಳು ಸದಾ ಸ್ಮರಣೀಯ ಎಂದರು.
    ಡಾ. ವೀಣಾ ಹೂಗಾರ ಪುಸ್ತಕ ಕುರಿತು ಮಾತನಾಡಿದರು. ಡಾ. ಎಸ್.ಆರ್. ಗುಂಜಾಳ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥಾಪಕರ ವಂಶಸ್ಥರಾದ ಸುರೇಶ ಹಾಲಭಾವಿ ಮತ್ತು ಪಾರ್ವತಿ ಹಾಲಭಾವಿ ಹಾಗೂ ಶಿವಯೋಗಿ ಕೊಪ್ಪಳ ದಂಪತಿಯನ್ನು ಸನ್ಮಾನಿಸಲಾಯಿತು.
    ಎಲ್.ಇ.ಎ. ಪ್ರೌಢಶಾಲೆಯ ಮಕ್ಕಳು ಪ್ರಾರ್ಥಿಸಿದರು. ಶಿವಾನಂದ ಹೂಗಾರ ನಿರ್ವಹಿಸಿದರು. ಐ.ಟಿ.ಐ. ಸಂಸ್ಥೆಯ ಅಧಿಕ್ಷಕ ಶಿವಲಿಂಗ ನೀಲಗುಂದ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts