

ದಾವಣಗೆರೆ: ನೈಸರ್ಗಿಕ ಪ್ರಪಂಚವು ದೃಶ್ಯ ಅದ್ಭುತಗಳಿಗೆ ಅನೇಕ ಬಾರಿ ಸಾಕ್ಷಿಯಾಗಿದೆ.ಇದೀಗ ಅಂತಹದ್ದೇ ಒಂದು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಫೋಟೋ ನೋಡಿದ್ರೆ ಯಾರೋ ಈ ಚಿಟ್ಟೆ ಮೇಲೆ ಬಣ್ಣಗಳಿಂದ ಚಿತ್ತಾರಾ ಬರೆದಿದ್ದಾರಾ? ಎನ್ನುವ ಪ್ರಶ್ನೆ ನಿಮಗೆ ಮೂಡುತ್ತದೆ.
ದಾವಣಗೆರೆಯ ವಿದ್ಯಾನಗರ ಪಾರ್ಕ್ಗಳಲ್ಲಿ ಮನುಷ್ಯ ಮುಖದ ಚಿತ್ರವನ್ನು ಬೆನ್ನ ಮೇಲೆ ಹೊಂದಿರುವ ಚಿಟ್ಟೆಗಳು ಪತ್ತೆಯಾಗುತ್ತಿದ್ದು, ಅದನ್ನು ಕಂಡ ಜನ ಅಚ್ಚರಿಗೊಳಗಾಗಿದ್ದಾರೆ. ಜರ್ಮನ್ ಸರ್ವಾಧಿಕಾರಿ ಹಿಟ್ಲರ್ ಮುಖ ಹೊಲುವ ಚಿಟ್ಟೆಗಳು ಇದಾಗಿದ್ದು ಈ ರೀತಿಯ ಚಿಟ್ಟೆಗಳನ್ನು ಹಿಟ್ಲರ್ ಬಗ್ಸ್ ಎಂದು ಕರೆಯುತ್ತಾರೆ.
ಇಂಗ್ಲಿಷ್ ನಲ್ಲಿರುವ Man Faced Stink Bug ಎಂದು ಕರೆಯಿಸಿಕೊಳ್ಳುವ ವಿಚಿತ್ರ ಚಿಟ್ಟೆಗಳು ದಾವಣಗೆರೆ ನಗರದ ವಿದ್ಯಾನಗರ ಪಾರ್ಕ್ನಲ್ಲಿ ಪತ್ತೆಯಾಗುತ್ತಿವೆ. ವಿಚಿತ್ರ ಚಿಟ್ಟೆಗಳನ್ನ ನೋಡಿ ಜನ ಆಶ್ಚರ್ಯ ಪಟ್ಟಿದ್ದಾರೆ.