VIDEO| ಚಾಕು ಹಿಡಿದು ಪೊಲೀಸ್​ ಠಾಣೆಗೆ ನುಗ್ಗಿದ ವ್ಯಕ್ತಿ; ಅಧಿಕಾರಿ ಮಾಡಿದ್ದೇನು?

Untitled design - 2023-09-17T175043.108
Published on

ಬ್ಯಾಂಗ್​ಕಾಕ್​: ಹತಾಶೆಗೊಂಡ ವ್ಯಕ್ತಿಯೊಬ್ಬ ಚಾಕು ಹಿಡಿದು ನೇರವಾಗಿ ಪೊಲೀಸ್​ ಠಾಣೆಯೊಳಗೆ ನುಗ್ಗಿ, ಪೊಲೀಸ್ ಅಧಿಕಾರಿ ಅನಿರುತ್ ಮಾಲೀಗೆ ಬೆದರಿಕೆ ಹಾಕಿದ್ದಾರೆ. ಏಕಾಏಕಿ ಠಾಣೆಗೆ ಪ್ರವೇಶಿಸಿದ ವ್ಯಕ್ತಿಯನ್ನು ತಾಳ್ಮೆ ಹಾಗೂ ಜಾಣ್ಮೆಯಿಂದ ನಡೆಸಿಕೊಂಡ ಮಾಲೀ ಅವರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ ಕಾಣುವಂತೆ ಪೊಲೀಸ್​ ಠಾಣೆಯೊಳಗೆ ಏಕಾಏಕಿ ಪ್ರವೇಶಿಸುವ 45 ವರ್ಷದ ವ್ಯಕ್ತಿಯೊಬ್ಬ ಚಾಕು ಹಿಡಿದು ಅಧಿಕಾರಿಗಳಿಗೆ ಬೆದರಿಸಿದ್ದಾರೆ. ಇದನ್ನು ಗಮನಿಸಿದ ಪೊಲೀಸ್​ ಅಧಿಕಾರಿ, ಆತನನ್ನು ಸೆರೆ ಹಿಡಿಯುವ ಬದಲಿಗೆ ತಾಳ್ಮೆಯಿಂದ ವ್ಯವಹರಿಸಿ, ಚಾಕುವನ್ನು ಕೊಡಲು ಹೇಳುತ್ತಾರೆ. ನಿರಂತರವಾಗಿ ಹೇಳಿದ ನಂತರ ವ್ಯಕ್ತಿ, ಹರಿತವಾದ ವಸ್ತವನ್ನು ಪೊಲೀಸರಿಗೆ ಒಪ್ಪಿಸುತ್ತಾರೆ.

ಚಾಕು ಕಸಿದುಕೊಂಡ ಅಧಿಕಾರಿಯು, ವ್ಯಕ್ತಿಯನ್ನು ಅಪ್ಪಿಕೊಂಡು ಸಮಾಧಾನ ಪಡಿಸುತ್ತಾರೆ. ಕೆಲ ಸಮಯ ಅವರಿಗೆ ಬುದ್ದಿ ಮಾತನ್ನು ತಿಳಿಸಿ, ಕುಡಿಯಲು ನೀರು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ವ್ಯಕ್ತಿ ಚಾಕು ಹಿಡಿಯಲು ಕಾರಣವೇನು?: ವಿಡಿಯೋದಲ್ಲಿನ ಮಾಹಿತಿ ಪ್ರಕಾರ, 45 ವರ್ಷದ ವ್ಯಕ್ತಿ ಮ್ಯೂಸಿಷನ್ ಎಂದು ಹೇಳಲಾಗಿದ್ದು, ಮೂರು ದಿನಗಳಿಂದ ಸೆಕ್ಯೂರಿಟಿ ಗಾರ್ಡ್​ ಆಗಿ ಕೆಲಸ ಮಾಡಿದ್ದಾರೆ. ಆದ್ರೆ, ಅವರಿಗೆ ಅದರ ಸಂಬಳ ದೊರಕಿಲ್ಲ. ಇದರೊಟ್ಟಿಗೆ ವ್ಯಕ್ತಿಯ ಬಳಿಯಿದ್ದ ಗಿಟಾರ್​ ಕೂಡ ಕಳ್ಳತನವಾಗಿದೆ. ಈ ಘಟನೆಗಳಿಂದ ಆತ ತೀವ್ರ ತಲೆ ಕೆಡಿಸಿಕೊಂಡಿದ್ದರು ಎನ್ನಲಾಗಿದೆ.

"ವ್ಯಕ್ತಿಯನ್ನು ಸಂತೈಸಿ, ನನ್ನ ಬಳಿಯಿರುವ ಗಿಟಾರ್​ ಅನ್ನು ನಿಮಗೆ ಕೊಡುವೆ. ಈಗ ಒಟ್ಟಿಗೆ ಊಟಕ್ಕೆ ಹೋಗೋಣ ಎಂದು ಹೇಳಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ. ಅನಾಮಧೇಯ ವ್ಯಕ್ತಿಯ ಮಾನಸಿಕ ಆರೋಗ್ಯವನ್ನು ಪರಿಶೀಲನೆ ನಡೆಸಲು ಹತ್ತಿರದ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು, ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ,(ವಿಡಿಯೋ ವರದಿ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net