ಬಡತನದ ಬೇಗೆಗೆ ಹೆಂಡತಿ, ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ!

Crime Symbolic
Published on

ನವದೆಹಲಿ: ಹಣಕಾಸಿನ ಸಮಸ್ಯೆಯಿಂದ ಸಂಸಾರವನ್ನು ನಡೆಸಲಾಗದೆ ಮನನೊಂದಿದ್ದ ವ್ಯಕ್ತಿಯೊರ್ವ ಹೆಂಡತಿ, ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆಗೆ ಯತ್ನಿಸಿದ ಘಟನೆ ದೆಹಲಿಯ ವಿಪಿನ್ ಗಾರ್ಡನ್​ ಬಳಿ ನಡೆದಿದೆ.

ಸುನಿತಾ (35), ನಾಲ್ಕು ವರ್ಷದ ಮಗ ಹಾಗೂ ನಾಲ್ಕು ತಿಂಗಳ ಹಸುಳೆ ಮೃತರು. ರಾಜೇಶ್ ತೀವ್ರವಾದ ಆರ್ಥಿಕ ಸಮಸ್ಯೆಯಿಂದ ಕಂಗೆಟ್ಟಿದ್ದನು. ಹೀಗಾಗಿ ಪತ್ನಿ, ಮಕ್ಕಳು ಮಲಗಿದ್ದಾಗ ಅವರಿಗೆ ಚಾಕುವಿನಿಂದ ಚುಚ್ಚಿ ಕೊಂದಿದ್ದಾನೆ. ತಾನೂ ಆತ್ಮಹತ್ಯಗೆ ಮುಂದಾಗಿದ್ದಾನೆ. ಈತನ ಕೈಗೆ ಗಾಯವಾದ ಕಾರಣ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನರಲ್ ಸ್ಟೋರ್ ನಡೆಸುತ್ತಿದ್ದ ರಾಜೇಶ್, ಇಂದು ಮುಂಜಾನೆ ತನ್ನ ಆರ್ಥಿಕ ಸಮಸ್ಯೆಯ ಬಗ್ಗೆ ಸ್ನೇಹಿತರಿಗೆ ಸಂದೇಶ ಕಳುಹಿಸಿದ್ದ. ಘಟನೆ ನಡೆದಾಗ ರಾಜೇಶ್‍ನ ತಂದೆ ತಾಯಿ ಬೇರೊಂದು ಕೋಣೆಯಲ್ಲಿದ್ದರು ಎನ್ನಲಾಗಿದೆ.

ಸುನಿತಾರನ್ನು 2015ರಲ್ಲಿ ಮದುವೆಯಾಗಿದ್ದ ರಾಜೇಶ್, ಆರಂಭದಲ್ಲಿ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ನಂತರ ಆಸ್ತಿಗಾಗಿ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿದ್ದ ಎಂದು ಮೃತ ಸುನಿತಾ ಕುಟುಂಬಸ್ಥರು ಆರೋಪಿಸಿದ್ದಾರೆ. ಮೋಹನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net