ಪತ್ನಿಯನ್ನು ಕೊಂದು ಖಾಲಿ ಬ್ಯಾರಲ್‌ನಲ್ಲಿ ಬಚ್ಚಿಟ್ಟ ಪತಿ !

husband who end his wife for a small matter and threw her into the forest at karwar
Published on

ಹಳಿಯಾಳ: ಹೆಂಡತಿಯನ್ನು ಕೊಲೆ ಮಾಡಿ ನೀರಿನ ಖಾಲಿ ಬ್ಯಾರಲ್​​ನಲ್ಲಿ ಬಚ್ಚಿಟ್ಟಿದ್ದ ವ್ಯಕ್ತಿಯನ್ನು ಹಳಿಯಾಳ ಹಾಗೂ ರಾಮನಗರ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಶಾಂತಕುಮಾರಿ ಮಡಿವಾಳ (38) ಮೃತ ದುರ್ದೈವಿ. ತೆರಗಾಂವ ಗ್ರಾಮದ ತುಕಾರಾಮ ಮಡಿವಾಳ ಕೊಲೆ ಮಾಡಿದ ಆರೋಪಿ. ತುಕಾರಾಮ, ಪಕ್ಕದ ಮನೆಯ ಮಹಿಳೆಯೊಂದಿಗೆ ಮಾತನಾಡುವ ವಿಷಯಕ್ಕೆ ಸಂಬಂಧಿಸಿದಂತೆ ಜಗಳವಾಡಿದ್ದಾನೆ. ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಪತ್ನಿ ಶಾಂತಕುಮಾರಿಯ ಕತ್ತುಹಿಸುಕಿ ಕೊಂದಿದ್ದಾನೆ.  .

ಕೊಲೆಯನ್ನ ಮುಚ್ಚಿ ಹಾಕುವ ಉದ್ದೇಶದಿಂದ ಪತ್ನಿಯ ಮೃತ ದೇಹವನ್ನು ತುಕಾರಾಮ್ ಬ್ಯಾರಲ್​​ನಲ್ಲಿ ಬಚ್ಚಿಟ್ಟಿದ್ದ. ಖಾನಾಪುರ ಮೂಲದ ರಿಜ್ವಾನ್ ಕುಂಬಾರಿ ಎಂಬುವವರ ಟಾಟಾ ಏಸ್ ವಾಹನವನ್ನು ಬಾಡಿಗೆ ಪಡೆದು ಕಾಡಿನಲ್ಲಿ ಮೃತದೇಹವನ್ನು ಎಸೆಯಲು ಮುಂದಾದಾಗ ಹಳಿಯಾಳ ಮತ್ತು ರಾಮನಗರದ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net