

Bike Stunt: ಒಡಿಶಾದ ರೂರ್ಕೆಲಾದಲ್ಲಿ ಸ್ಪೈಡರ್ ಮ್ಯಾನ್ ವೇಷ ತೊಟ್ಟು ಜನನಿಬಿಡ ರಸ್ತೆಯಲ್ಲಿ ಅಪಾಯಕಾರಿ ಸ್ಟಂಟ್ ಮಾಡಿ ಸಂಚಾರ ಉಲ್ಲಂಘನೆ ಮಾಡಿದ್ದಕ್ಕೆ ಪೊಲೀಸರು ಬೈಕ್ ವಶಪಡಿಸಿಕೊಂಡು, ಸವಾರನಿಗೆ 15,000 ರೂ. ದಂಡ ಹಾಕಿದ್ದಾರೆ.
ಬುಧವಾರ (ಆಗಸ್ಟ್ 20) ರೂರ್ಕೆಲಾದಲ್ಲಿ ಈ ಘಟನೆ ನೆಡೆದಿದ್ದು, ಸವಾರ ಸ್ಪೈಡರ್ ವೇಷ ತೊಟ್ಟು, ಹೆಲ್ಮೆಟ್ ಇಲ್ಲದೇ ಜನನಿಬಿಡ ರಸ್ತೆಯಲ್ಲಿ ಬೈಕ್ನಲ್ಲಿ ಅತಿವೇಗವಾಗಿ ಚಾಲನೆ ಮಾಡಿ, ವ್ಹೀಲಿಂಗ್, ಸ್ಟಂಟ್ ಮಾಡಿದ್ದು, ಬೇರೆ ವಾಹನ ಚಾಲಕರು, ಪಾದಚಾರಿಗಳಿಗೆ ಅನಾನುಕೂಲ ಮಾಡಿತ್ತು. ಸದ್ಯ ವಿಡಿಯೋ ವೈರಲ್ ವೈರಲ್ ಆಗಿದೆ.
ವೈರಲ್ ವಿಡಿಯೋ ಬೆನ್ನಲ್ಲೇ ಬೈಕ್ ಸವಾರರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿರುವ ಪೊಲೀಸರು. ಬೈಕ್ ಸ್ಪೋಟಕ ಶಬ್ದ ಹೊಂದಿರುವ ಮಾರ್ಪಡಿಸಿದ ಸೈಲೆನ್ಸರ್ ಹೊಂದಿತ್ತು ಎನ್ನಲಾಗಿದೆ.
ಹೆಲ್ಮೆಟ್ ಧರಿಸದೆ ಮೋಟಾರ್ ಸೈಕಲ್ ಸವಾರಿ ಮಾಡಿದ, ವೇಗದ ಮಿತಿಯನ್ನು ಉಲ್ಲಂಘಿಸಿದ ಮತ್ತು ಮಾರ್ಪಡಿಸಿದ ಸೈಲೆನ್ಸರ್ ಬಳಸಿದ ಆರೋಪದ ಮೇಲೆ ಆ ವ್ಯಕ್ತಿಗೆ 15,000 ರೂ. ದಂಡ ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)