ಅಂತ್ಯ ಕಾಣದ ರೀಲ್ಸ್​ ಹುಚ್ಚಾಟ! ತಲೆಕೆಳಗಾಗಿ ನೇತಾಡಲು ಹೋದ ಯುವಕ ಸಾವು

WhatsApp Image 2024-04-19 at 8.58.19 PM
Published on

ಉತ್ತರ ಪ್ರದೇಶ: ಯುವಕನೊಬ್ಬ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್​ ಮಾಡಿ, ಹೆಚ್ಚಿನ ಲೈಕ್ಸ್ ಪಡೆಯುವ ಸಲುವಾಗಿ ಶಾಲಾ ಕಟ್ಟದ ಮೇಲೆ ತಲೆಕೆಳಗಾಗಿ ನಿಂತು ಕಸರತ್ತು ಮಾಡಲು ಪ್ರಯತ್ನಿಸಿದ್ದಾನೆ. ಈ ವೇಳೆ ಆತನ ಮೇಲೆ ಕಟ್ಟಡದ ಮೇಲಿದ್ದ ಚಪ್ಪಡಿ ಕಲ್ಲು ಉರುಳಿ ಬಿದಿದ್ದು, ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಬಾಂದ್ರಾ ಜಿಲ್ಲೆಯಲ್ಲಿ ವರದಿಯಾಗಿದೆ.

ರೀಲ್ಸ್​ ಚಿತ್ರೀಕರಣ ಮಾಡುತ್ತಿದ್ದಾಗ ಆತನ ಮೇಲೆ ಚಪ್ಪಡಿ ಬಿದ್ದ ಪರಿಣಾಮ ಕೆಲ ಸಮಯ ಯುವಕ ನರಳಾಡಿ ಪ್ರಾಣಬಿಟ್ಟಿದ್ದಾನೆ ಎಂದು ವರದಿ ಉಲ್ಲೇಖಿಸಿದೆ. ವಿಡಿಯೋ ಮಾಡುವಾಗ ಸ್ಲ್ಯಾಬ್‌ನ ಮಧ್ಯೆ ಆತನ ಕಾಲುಗಳು ಸಿಕ್ಕಿಹಾಕಿಕೊಂಡಿದೆ. ಆ ವೇಳೆ ಕಲ್ಲು ಬಿದ್ದು ಸಾವನ್ನಪ್ಪಿದ್ದಾನೆ. ಶಾಲೆಯ ಟೆರೇಸ್‌ನಿಂದ ತಲೆಕೆಳಗಾಗಿ ನೇತಾಡುತ್ತಿದ್ದ 21 ವರ್ಷದ ಯುವಕನನ್ನು ಶಿವಂ ಎಂದು ಗುರುತಿಸಲಾಗಿದೆ.

ಯುವಕನ ಸಾವಿನ ಸುದ್ದಿ ತಿಳಿದ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಊರಿನ ಮಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸದ್ಯ ಪ್ರಕರಣ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net